ಬೆಂಗಳೂರು : ಓಲಾ ಉಬರ್ ಆಟೋ ಸೇವೆಗಳಿಗೆ ಕೊಕ್ ಕೊಡೋಕೆ ಆಟೋ ಚಾಲಕರೇ ರೆಡಿಯಾಗಿದ್ದಾರೆ. ಓಲಾ ಉಬರ್ ಗಳ ಉಪಟಳಕ್ಕೆ ಬ್ರೇಕ್ ಹಾಕಲು ಮಂಗಳವಾರದಿಂದ ಬರಲಿದೆ. ಆಟೋ ಚಾಲಕರ ನಯಾ ಆ್ಯಪ್ ನಮ್ಮಯಾತ್ರಿ.! ಹೌದು, ಕಮೀಷನ್ ಆಸೆಗೆ ದುಪ್ಪಟ್ಟು ದರ ವಿಧಿಸಿ ಆಟೋ ಚಾಲಕರ ಜೊತೆ ಪ್ರಯಾಣಿಕರು ಕಾದಾಟಕ್ಕೆ ಇಳಿಯುವಂತೆ ಮಾಡಿರುವ ಒಲಾ ಉಬರ್ ವಿರುದ್ಧ ಸಿಡಿದೆದ್ದಿದ್ದ ಆಟೋ ಚಾಲಕರು ತಾವೇ ಆ್ಯಪ್ ರಚಿಸಿಕೊಂಡಿದ್ದಾರೆ.ಸಾರಿಗೆ ಇಲಾಖೆ ಫಿಕ್ಸ್ ಮಾಡಿರುವ ಕಡಿಮೆ ದರದಲ್ಲಿ ಸೇವೆ ನೀಡಲು ಸಜ್ಜಾಗಿದ್ದಾರೆ.
ಹೇಗಿರಲಿದೆ ನಮ್ಮ ಯಾತ್ರಿ ಆ್ಯಪ್ ಸೇವೆ..?
ಆಟೋ ಡ್ರೈವರ್ಸ್ ಒಗ್ಗಟ್ಟಾಗಿ ತಂದಿರುವ ಹೊಸ ಆ್ಯಪ್
ಮಂಗಳವಾರದಿಂದ ಪ್ರಯಾಣಿಕರಿಗೆ ಲಭ್ಯವಾಗಲಿದೆ
ಪ್ರತಿ 2 ಕಿ.ಮೀ.ಗೆ 30ರೂ., ಬಳಿಕ ಕಿ.ಮೀ.ಗೆ 15 ರೂ.ಪಿಕ್ಸ್
ಸರ್ವೀಸ್ ಜಾರ್ಜ್ ಕೇವಲ 10 ರೂ. ಮಾತ್ರ ಇರಲಿದೆ
ಪ್ರಯಾಣಿಕರಿಗೆ 3-4 ಡ್ರೈವರ್‌ಗಳ ಆಯ್ಕೆಗೆ ಅವಕಾಶ
ಡ್ರೈವರ್ಸ್ ಮಧ್ಯೆ ಪೈಪೋಟಿ ಇರುವುದರಿಂದ ಸಮಸ್ಯೆಯಿಲ್ಲ
ನಿಜಕ್ಕೂ ಬೆಂಗಳೂರಿಗರಿಗೆ ತೀರಾ ಅಗತ್ಯವಾಗಿರುವಂತಹ ಸೇವೆ ಇದು. ಓಲಾ-ಊಬರ್‌ನಿಂದ ರೋಸಿ ಹೋಗಿರುವ ಜನ್ರಿಗೆ ಈ ಆ್ಯಪ್‌ನಿಂದ ಬಿಗ್ ರಿಲೀಫ್ ಸಿಗೋದಂತೂ ಪಕ್ಕಾ ಆಗಿದ್ದು, ಮಂಗಳವಾರದಿಂದಲೇ ಪ್ರಯೋಗೋಕವಾಗಿ ಆರಂಭ ಆಗುತ್ತಿದೆ.ಆದ್ರೆ, ಜನರ ರೆಸ್ಪಾನ್ಸ್ ಯಾವ ರೀತಿ ಇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಪವರ್ ಟಿವಿ ಬೆಂಗಳೂರು