Monday, December 23, 2024

ಶಾಸಕ ರೇಣುಕಾಚಾರ್ಯ ಸಹೋದರ ರಮೇಶ್‌ ಪುತ್ರ ನಾಪತ್ತೆ

ದಾವಣಿಗೆರೆ : ಶಾಸಕ ರೇಣುಕಾಚಾರ್ಯ ಸಹೋದರ ರಮೇಶ್‌ ಪುತ್ರ 2 ದಿನಗಳಿಂದ ನಾಪತ್ತೆಯಾಗಿದ್ದಾನೆ.

ಸ್ನೇಹಿತರ ಜೊತೆ ಗೌರಿಗದ್ದೆಗೆ ತೆರಳಿ ವಾಪಸ್‌ ಆದ ಬಳಿಕ ನಾಪತ್ತೆಯಾಗಿದ್ದು, ಸೋಮವಾರ ಬೆಳಗ್ಗೆ 6.48ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ, ಚಂದ್ರಶೇಖರ್ ಚಲಾಯಿಸುತ್ತಿದ್ದ ಕ್ರೇಟಾ ಕಾರು ಇದುವರೆಗೂ ಪತ್ತೆ ಆಗಿಲ್ಲ.

ಹೊನ್ನಾಳಿಯಲ್ಲಿ ಎಂಪಿ ರೇಣುಕಾಚಾರ್ಯ ಕಣ್ಣೀರು ಹಾಕಿದ್ದು, ನಾನು ಸೋತಾಗಲು ಕಣ್ಣೀರು ಬಂದಿರಲಿಲ್ಲ. ಭಾನುವಾರ ರಾತ್ರಿ 11.56ಕ್ಕೆ ಶಿವಮೊಗ್ಗದಿಂದ ವಾಹನ ಹೊರಟ ನಂತರ ಈವರೆಗೂ ಪತ್ತೆಯಾಗಿಲ್ಲ. ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ತೀವ್ರ ತಪಾಸಣೆ ಮಾಡುತ್ತಿದ್ದು, ರೇಣುಕಾಚಾರ್ಯರ ನಿವಾಸಕ್ಕೆ ಆಪಾರ ಸಂಖ್ಯೆಯ ಕಾರ್ಯಕರ್ತರು ಅಭಿಮಾನಿಗಳು ಆಗಮಿಸಿದ್ದು, ಇದೀಗ 48 ಗಂಟೆ ಕಳೆದ್ರು ಇದುವೆರೆಗು ಪತ್ತೆ ಆಗಿಲ್ಲ ಎಂದು ಮನೆಯವರು ಆತಂಕಕೀಡಾಗಿದ್ದಾರೆ. ಶಿವಮೊಗ್ಗ ಹಾವೇರಿ ಚಿತ್ರದುರ್ಗದಲ್ಲಿ ಹಾದು ಹೋಗುವ ಎಲ್ಲಾ ಹೈವೇ ಟೋಲ್​​ಗಳಲ್ಲಿ ಕಾರ್ ಮೂವಮೆಂಟ್ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES