Sunday, January 12, 2025

ನಾಗಮಂಗಲ ಶಾಸಕರ ವಿರುದ್ದ ಎಲ್​ ಆರ್​ ಶಿವರಾಮೇಗೌಡ ಗಂಭೀರ ಆರೋಪ

ಮಂಡ್ಯ: ಇಂದು ಮದ್ದೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಎಲ್ ಆರ್ ಶಿವರಾಮೆ ಗೌಡರು, ನಾಗಮಂಗಲ ಶಾಸಕರ ಬಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಶಾಸಕ ಸುರೇಶ್ ಗೌಡರನ್ನ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದು, ಶಾಸಕರ ವಿರುದ್ದ ಶಿವರಾಮೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಯಾವುದೇ ಕಾಮಗಾರಿ‌ ನಡೆದ್ರು 8% ಶಾಸಕ ಸುರೇಶ್ ಗೌಡನಿಗೆ 40% ರಾಜ್ಯ ಸರ್ಕಾರಕ್ಕೆ‌. ಈತ ರಾಜ್ಯ ಸರ್ಕಾರದ 40 % ಜೊತೆ 8 % ಕಮಿಷನ್ ಪಡೆದು 48% ಭ್ರಷ್ಟಾಚಾರ ನಡೆಸುತ್ತಿದ್ದಾರೆ. 48% ಪರ್ಸೆಂಟ್ ಕಮೀಷನ್ ಪಡೆಯುತ್ತಿರೋದಕ್ಕೆ ನನ್ನ ಬಳಿ ದಾಖಲೆ ಇದೆ. ಇದು ಸುಳ್ಳು ಅನ್ನೋದಾದ್ರೆ ಆತ ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ. ದುಡ್ಡು ಕೊಟ್ಟು ಕೆಲಸ ತರಬೇಕು ಅಂತ ಹೇಳಿದ್ದಾರೆ.

ದುಡ್ಡುಕೊಟ್ಟು ಕೆಲಸ ತರುವ ಎಂಎಲ್ಎಗಳು ಯಾರಿಗಾದ್ರು ಬೇಕಾ? ಜೆಡಿಎಸ್ MLA ಗಳು ಉಳಿದಕ್ಕೆಲ್ಲ ಅಜೆಸ್ಟ್ಮೆಂಟ್ ಮಾಡಿಕೊಳ್ಳಲು ಹಾಗುತ್ತೆ ಜನರ ಕೆಲಸ ಮಾಡಕ್ಕೆ ಹಾಗಲ್ವಾ? ದುಡ್ಡು ವಸೂಲಿ ಮಾಡಕ್ಕೆ ಈ ಕಾರ್ಯ ತರುತ್ತಾರೆ. ಬೇಲಿನೆ ಎದ್ದು ಹೊಲ ಮೇಯುತ್ತಿದೆ, ಇದರ ವಿರುದ್ದ ಜನರೇ ಹೋರಾಟ ಮಾಡುತ್ತಾರೆ. ಶಾಸಕ ಸುರೇಶ್ ಗೌಡ ವಿರುದ್ದ LRS ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES