Monday, December 23, 2024

ಜೋಯಿಡಾ: ಕಾರು ಚಲಾಯಿಸಿದ್ದ ಯುವಕನ ಬಂಧನ

ಕಾರವಾರ: ತೂಗುಸೇತುವೆ ಮೇಲೆ ಕಾರು ಚಲಾಯಿಸಿದ ಪ್ರಕರಣ, ಕಾರು ಚಲಾಯಿಸಿದ್ದ ಯುವಕನ ಬಂಧನ. ಜೋಯಿಡಾದ ಶಿವಪುರ ತೂಗುಸೇತುವೆ ಮೇಲೆ ಹುಚ್ಚಾಟ ಮೆರೆದಿದ್ದ ಯುವಕರ ತಂಡ.

ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನಲ್ಲಿ ನಡೆದಿದ್ದ ಪ್ರಕರಣದಲ್ಲಿ, ಮುಜಾಹಿದ್ ಆಜಾದ್ ಸಯ್ಯದ್(25) ಬಂಧಿತ ಆರೋಪಿ
ಜೋಯಿಡಾ ತಾಲ್ಲೂಕಿನ ಉಳವಿ ಗ್ರಾಮದ ನಿವಾಸಿ ಮುಜಾಹಿದ್.ಶಿವಪುರ ತೂಗು ಸೇತುವೆಯ ಮೇಲೆ ಕಾರು ಚಲಾಯಿಸಿ ಹುಚ್ಚಾಟ ಮೆರೆದಿದ್ದ ಪ್ರವಾಸಿಗರು.

ಯುವಕರ ಪುಂಡಾಟದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ದೂರು ನೀಡಿದ್ದ ಗ್ರಾಮ ಪಂಚಾಯತಿ ಉಪಾಧ್ಯಕ್ಷರು. ಉಪಾಧ್ಯಕ್ಷ ಮಂಜುನಾಥ ಮೊಖಾಶಿ ಎಂಬುವವರ ದೂರಿನನ್ವಯ ಯುವಕನ ವಿರುದ್ಧ ಕ್ರಮನ ಕೈಗೊಳ್ಳಲಾಗಿದೆ. ದೂರಿನಂತೆ ಮಹಾರಾಷ್ಟ್ರ ನೋಂದಣಿಯ ಕಾರನ್ನ ಪತ್ತೆಮಾಡಿದ ಪೊಲೀಸರು. ಕಾರನ್ನು ತೂಗುಸೇತುವೆ ಮೇಲೆ ಚಲಾಯಿಸಿದ್ದ ಮುಜಾಹಿದ್ ವಿರುದ್ಧ ಕಲಂ 279, 336 ಅಡಿ ಪ್ರಕರಣ. ಹುಚ್ಚಾಟ ಮೆರೆದಿದ್ದ ಯುವಕನನ್ನ ವಶಕ್ಕೆ ಪಡೆದ ಪೊಲೀಸರು. ಜೋಯಿಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES