Wednesday, January 22, 2025

ಹೂಡಿಕೆ ಸಮಾವೇಶದಲ್ಲೂ ಕಾಂತಾರ ಸಿನಿಮಾದ ಹಂಗಾಮ..!

ಬೆಂಗಳೂರು: ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಹೂಡಿಕೆ ಸಮಾವೇಶ ಹೊಸದೊಂದು ಇತಿಹಾಸ ನಿರ್ಮಿಸಲು ಮುಂದಾಗಿದೆ.

ಇನ್ನು ಈ ಸಮಾವೇಶದಲ್ಲಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಕಾಂತಾರ ಸಿನಿಮಾದ ಕುರಿತು ಹೇಳಿಕೆ ನಿಡಿದ್ದಾರೆ. ಈ ಸಂದರ್ಭದಲ್ಲಿ, ಹೂಡಿಕೆಯನ್ನ ಕಾಂತಾರ ಮೂವಿಗೆ ಹೋಲಿಸಿದ್ದಾರೆ ಗೋಯಲ್.

ಈ ಕುರಿತು ಸಚಿವರು ಕಾಂತಾರ ಸಿನಿಮಾ ನೋಡಿದೆ. ಅದು ಸಣ್ಣ ಬಜೆಟ್‌ನ ಸಿನಿಮಾ. ಇದರಲ್ಲಿ ಕರ್ನಾಟಕದ ಸಂಸ್ಕೃತಿ ತೋರಿಸುತ್ತದೆ. ನಾನು ಈ ಚಿತ್ರದ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿದ್ದೇನೆ. ಎರಡಂಕಿ ಬಜೆಟ್ ಇಂದು 300ಕೋಟಿಗೂ ಹೆಚ್ಚು ಆದಾಯ ಗಳಿಸಿದೆ. ಹೂಡಿಕೆ ಕೂಡ ಸಣ್ಣದಾಗಿ ಮಾಡಿದ್ರೂ, ದೊಡ್ಡಮಟ್ಟದಲ್ಲಿ ಯಶಸ್ವಿ ಮಾಡಬೇಕಿದೆ ಎಂದು ಹೂಡಿಕೆ ಸಮಾವೇಶದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES