Monday, December 23, 2024

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬಂಪರ್ ಘೋಷಣೆ..!

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬಂಪರ್ ಘೋಷಣೆ. ಮೊದಲ ದಿನವೇ ಹರಿದು ಬಂದ ಬಂಪರ್ ಬಂಡವಾಳ ಹೂಡಿಕೆ. ದಿಗ್ಗಜ ಉದ್ಯಮಿಗಳಿಂದ ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ.

ಜೆಎಸ್ ಡಬ್ಲ್ಯೂ ಗ್ರೂಪ್‌ ಮುಂದಿನ ವರ್ಷಗಳಲ್ಲಿ ಒಂದು‌ ಲಕ್ಷ ಕೋಟಿ‌ ಹೂಡಿಕೆ, ಜೆಎಸ್ ಡಬ್ಲ್ಯೂ ಅದ್ಯಕ್ಷ ಸಜ್ಜನ್ ಜಿಂದಾಲ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ 50 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ಸ್ಟೈರ್ಲೈಟ್ ಪವರ್ ಸಿಇಓ ಪ್ರತೀಕ್ ಅಗರ್ವಾಲ್ ಘೋಷಣೆ ಮಾಡಿದ್ದು, ಇಂದನ ಕ್ಷೇತ್ರದಲ್ಲಿ ಹೂಡಿಕೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ.

ಗ್ರೀನ್ ಎನರ್ಜಿಯ ಸಂಶೋಧನೆ ಯಲ್ಲಿ ಹೂಡಿಕೆ ಮಾಡೋದಾಗಿ ಹೇಳಿಕೆ ನಿಡಿದ್ದು, ಅದಾನಿ ಪೋರ್ಟ್ ಸಿಇಓ ಕಿರಣ್ ಅದಾನಿ ಹೇಳಿಕೆ.
ಈಗಾಗಲೇ 20 ಸಾವಿರ ಕೋಟಿಯನ್ನು ಹೂಡಿಕೆ ಮಾಡಲಾಗಿದೆ. ಅದಾನಿ ಪೋರ್ಟ್,ಅಡುಗೆ ಎಣ್ಣೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗಿದೆ.
ಉಡುಪಿ ಪವರ್ ಸ್ಟೇಷನ್ ,ಮಂಗಳೂರು ವಿಮಾನ ನಿಲ್ದಾಣ ನಮ್ಮ ಅದಾನಿ ಗ್ರೂಪನಿಂದ ನಡೆಯುತ್ತಿದೆ. ರಾಜ್ಯದಲ್ಲಿ ಮಲ್ಟಿಪಲ್ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಪಡಿಸುತ್ತೇವೆ. ರಾಜ್ಯದಲ್ಲಿ ಮುಂದಿನ 7 ವರ್ಷದಲ್ಲಿ 1 ಲಕ್ಷ ಕೋಟಿ ಹೂಡಿಕೆ ಮಾಡುತ್ತೇವೆ.
ಅಹಾರ ಸಂಸ್ಕರಣೆ ಮತ್ತು ಇಂದನ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತೇವೆ ಎಂದು ಕರಣ್ ಅದಾನಿ ಘೋಷಣೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES