ಆಸ್ಟ್ರೇಲಿಯಾ: ಬಾಂಗ್ಲಾದೇಶ ವಿರುದ್ಧ ಇಂದು ನಡೆದ ವಿಶ್ವಕಪ್ನ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ಭಾರತಕ್ಕೆ ಸಮಿ ಫೈನಲ್ ಹಾದಿ ಸುಗಮವಾಗಿದೆ.
ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತದ ವಿರುದ್ಧ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಫಿಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. ಭಾರತದ ಪರ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅರ್ಧ ಶತಕ ಸಿಡಿಸಿ ಭಾರತ ತಂಡಕ್ಕೆ ನೆರವಾದರು.
ಇನ್ನು ಈ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ತಂಡ ಮೊದಲು 6 ಓವರ್ಗಳಲ್ಲಿ ಉತ್ತಮ ರನ್ ಕಲೆಹಾಕಿತು. ಈ ಮಳೆ ಮಳೆ ಬಂದ ಕಾರಣಕ್ಕೆ ಸ್ವಲ್ಪಕಾಲ ಪಂದ್ಯ ಸ್ಥಗಿತಗೊಳಿಸಲಾಯಿತು. ನಂತರ 4 ಓವರ್ ಕಡಿತಗೊಳಿಸಿ ಡಿಆರ್ಎಸ್ ಪ್ರಕಾರ ಬಾಂಗ್ಲಾದೇಶ ತಂಡಕ್ಕೆ ಒಟ್ಟು 16 ಓವರ್ಗಳಲ್ಲಿ 151 ರನ್ ಟಾರ್ಗೆಟ್ ನೀಡಲಾಯಿತು. ಅಂತಿಮವಾಗಿ ಬಾಂಗ್ಲಾದೇಶ ತಂಡ 16 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿತು. ಈ ಮೂಲಕ ಭಾರತ 5 ರನ್ಗಳ ಅಂತರದಿಂದ ಭರ್ಜರಿ ಜಯಸಾಧಿಸಿತು.
ಭಾರತದ ಪರ ಅರ್ಷದೀಪ್ ಸಿಂಗ್ 2, ಹಾರ್ದಿಕ್ ಪಾಂಡ್ಯ 2, ಮೊಹಮ್ಮದ್ ಶಮಿ 1 ವಿಕೆಟ್ ಪಡೆದು ಮಿಂಚಿದರು.