Monday, December 23, 2024

ಜಿಟಿಡಿ ಮಣಿಸಲು ಮುಂದಾದ್ರ ಪಂಚಪಾಂಡವರು..?

ಮೈಸೂರು: ಜಿಟಿಡಿ ಮಣಿಸಲು ಜೆಡಿಎಸ್ ಪಕ್ಷದಲ್ಲಿಯೇ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರ ಎಂಬ ವಿಷಯ ರಾಜಕೀಯ ವಲಯದಲ್ಲಿ ಸುದ್ದಿಯಾಗಿದೆ. ಇನ್ನು ಜಿ.ಟಿ.ದೇವೇಗೌಡ ವಿರುದ್ದ ಗುಪ್ತ ಸಭೆ ನಡೆಸಿದ್ದಾರೆ ಎಮದು ಕೇಳಿಬರುತ್ತಿದೆ.

ಪಂಚ ಪಾಂಡವರಿಂದ ತಮ್ಮದೇ ನಾಯಕನ ವಿರುದ್ಧ ರಣತಂತ್ರ ಮಾಡಿದ್ದಾರ ಎಂದು ಕೇಳಿಬರುತ್ತಿದ್ದು, ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಸಭೆ. ಗೆಲುವಿಗೆ ಕಾರಣರಾಗಿದ್ದವರಿಂದಲೇ ಸೋಲಿಸಲು ರಣತಂತ್ರ ನಡೆಸಲಾಗುತ್ತಿದೆ ಎಮದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಜಿ.ಟಿ.ದೇವೇಗೌಡ ಪಕ್ಷದಲ್ಲಿ ಉಳಿದಿರುವುದಕ್ಕೆ ಅಸಮಾಧಾನ, ಕಳೆದ ಬಾರಿಯ ಚುನಾವಣೆಯಲ್ಲಿ ಜಿಟಿಡಿ ಗೆಲುವಿಗೆ ಕಾರಣರಾಗಿದ್ದರು
ಸಿದ್ದರಾಮಯ್ಯ ಅವರನ್ನ ಸೋಲಿಸಲು ಕಾರಣರಾಗಿದ್ದರು. ಬೆಳವಾಡಿ‌ ಶಿವಮೂರ್ತಿ, ಮಾದೇಗೌಡ, ಬೀರಿಹುಂಡಿ ಬಸವಣ್ಣ, ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಕೆಂಪನಾಯಕರಿಂದ‌ ವ್ಯೂಹ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

RELATED ARTICLES

Related Articles

TRENDING ARTICLES