Wednesday, January 22, 2025

ಧ್ರುವ ಸರ್ಜಾ ಘರ್ಜನೆಗೆ ಯೂಟ್ಯೂಬ್ ಅಲ್ಲೋಲ ಕಲ್ಲೋಲ

ಸಿನಿಮಾದಿಂದ ಸಿನಿಮಾಗೆ ಉತ್ತುಂಗಕ್ಕೇರುತ್ತಿದೆ ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾಸ್ ಗತ್ತು. ಮಾಸ್​ ಮಹಾರಾಜನಾಗಿ ಮಿಂಚ್ತಿರೋ ಬಹದ್ದೂರ್ ಗಂಡು, ಪ್ಯಾನ್ ಇಂಡಿಯಾ ಸ್ಟಾರ್​ ಪಟ್ಟಕ್ಕೇರುತ್ತಿದ್ದಾರೆ. ಮಾರ್ಟಿನ್ ಮುಕ್ತಾಯದ ಹಂತದಲ್ಲಿದ್ರೆ, ಕೆ.ಡಿ. ಟೈಟಲ್ ಟೀಸರ್ ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಆ ಭರ್ಜರಿ ದಾಖಲೆಗಳ ಗಮ್ಮತ್ತಿನ ಸ್ಟೋರಿ ನಿಮ್ಮ ಮುಂದೆ.

  • KD ಟೀಸರ್​ಗೆ 5 ಕೋಟಿ ವೀವ್ಸ್.. ಕನ್ನಡದಲ್ಲೇ 2.7 ಕೋಟಿ..!
  • ಮಾರ್ಟಿನ್ 1.7 ಕೋಟಿ.. ಕರಾಬು ಸಾಂಗ್ 298 ಮಿಲಿಯನ್
  • ಇದು ಧ್ರುವ ಮಾಸ್ ಗತ್ತು, ಗಮ್ಮತ್ತಿಗೆ ಹರಿದು ಬಂದ ಹಿಟ್ಸ್..!

ದಶಕದ ಹಿಂದೆ ಅದ್ಧೂರಿಯಾಗಿ ಕನ್ನಡ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಪ್ರತಿಭೆ ಧ್ರುವ ಸರ್ಜಾ. ಅರ್ಜುನ್ ಸರ್ಜಾರ ಅಳಿಯ, ಶಕ್ತಿ ಪ್ರಸಾದ್ ಮೊಮ್ಮಗ ಹಾಗೂ ಚಿರಂಜೀವಿ ಸರ್ಜಾರ ಸಹೋದರನಾಗಿ ಧ್ರುವಗೆ ಒಳ್ಳೆಯ ಹಿನ್ನೆಲೆ ಇತ್ತು. ಆದ್ರೆ ಇಲ್ಲಿ ಸ್ಟಾರ್​ ಪಟ್ಟ ಪಡೆಯೋಕೆ ಟ್ಯಾಲೆಂಟ್ ಬೇಕಿತ್ತು. ಡ್ಯಾನ್ಸ್, ಫೈಟ್, ಡೈಲಾಗ್ ಡೆಲಿವರಿ, ಮನೋಜ್ಞ ಅಭಿನಯ ಹೀಗೆ ಎಲ್ಲದರಲ್ಲೂ ಧ್ರುವ ಭಲೇ ಅನಿಸಿಕೊಂಡ್ರು.

ಅದ್ಧೂರಿ ನಂತ್ರ ಬಂದಂತಹ ಬಹದ್ದೂರ್ ಹಾಗೂ ಭರ್ಜರಿ ಸಿನಿಮಾಗಳು ಕೂಡ ಬೊಂಬಾಟ್ ಆಗಿದ್ವು. ಹಾಗಾಗಿಯೇ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಆಗಿ ಬಹುಬೇಗ ಪ್ರೇಕ್ಷಕರ ಮನಸ್ಸುಗಳಲ್ಲಿ ಗಟ್ಟಿಯಾಗಿ ನೆಲೆಯೂರಿದ್ರು ಧ್ರುವ. ನಂತ್ರ ಬಂದ ಪೊಗರು ಅಕ್ಷರಶಃ ಸೆನ್ಸೇಷನ್ ಸೃಷ್ಟಿಸಿತು. ಟೀಸರ್, ಟ್ರೈಲರ್, ಸಾಂಗ್ಸ್, ಧ್ರುವ ಲುಕ್ಸ್ ಹೀಗೆ ಒಂದೊಂದು ಎಲಿಮೆಂಟ್ ಕೂಡ ನೋಡುಗರ ನಾಡಿಮಿಡಿತ ಹೆಚ್ಚಿಸಿತ್ತು.

ಸದ್ಯ ಮಾರ್ಟಿನ್ ಮುಖೇನ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ ಬಹದ್ದೂರ್ ಗಂಡು. ಎಪಿ ಅರ್ಜುನ್ ನಿರ್ದೇಶನ, ಉದಯ್ ಕೆ ಮೆಹ್ತಾ ನಿರ್ಮಾಣದ ಮಾರ್ಟಿನ್, ಧ್ರುವ ಕರಿಯರ್​ನ ಬಿಗ್ಗೆಸ್ಟ್ ಸಿನಿಮಾ ಆಗಲಿದೆ. ಅದ್ರ ಟೀಸರ್ ಝಲಕ್ ಬರೋಬ್ಬರಿ ಒಂದು ಕೋಟಿ 70 ಲಕ್ಷ ವೀವ್ಸ್​ನಿಂದ ಧೂಳೆಬ್ಬಿಸಿದೆ.

ಆದ್ರೀಗ ಮ್ಯಾಟರ್ ಅದಲ್ಲ. ಕೆಡಿ. ಯೆಸ್.. 70ರ ದಶಕದ ಬೆಲ್​ಬಾಟಂ ರೆಟ್ರೋ ಸ್ಟೈಲ್​ನ ಆ್ಯಕ್ಷನ್ ವೆಂಚರ್ ಇದಾಗಿದ್ದು, ರೀಸೆಂಟ್ ಆಗಿ ರಿಲೀಸ್ ಆದ ಅದ್ರ ಟೈಟಲ್ ಟೀಸರ್ ಬರೋಬ್ಬರಿ ಐದು ಕೋಟಿ ವೀವ್ಸ್​ನಿಂದ ದಾಖಲೆ ಬರೆದಿದೆ. ಹೌದು.. ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ರಿಲೀಸ್ ಆಗಿರೋ ಈ ಟೀಸರ್ ಎಲ್ಲಾ ಭಾಷೆಗಳಿಂದ 5 ಕೋಟಿಯ ಗಡಿ ದಾಟಿದೆ. ಕನ್ನಡ ಒಂದರಲ್ಲೇ 2.7 ಕೋಟಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಧ್ರುವ ಸರ್ಜಾ ಸಿನಿಮಾಗಳ ಸ್ಯಾಂಪಲ್ಸ್ ಹೀಗೆ ಯೂಟ್ಯೂಬ್​ನಲ್ಲಿ ಸಂಚನಲ ಸೃಷ್ಟಿಸ್ತಿರೋ ಇದೇ ಮೊದಲಲ್ಲ. ಈ ಹಿಂದೆ ಪೊಗರು ಚಿತ್ರದ ಕರಾಬು ಸಾಂಗ್ ನಿರೀಕ್ಷೆಗೂ ಮೀರಿ ಕ್ರೇಜ್ ಹುಟ್ಟಿಸಿತ್ತು. ಬರೋಬ್ಬರಿ 298 ಮಿಲಿಯನ್ ವೀವ್ಸ್​ನಿಂದ ಸಾರ್ವಕಾಲಿಕ ದಾಖಲೆ ಬರೆದಿದೆ. ಕಾರಣ ಅದ್ರ ಡ್ಯಾನ್ಸ್, ಹಾಡಿನ ಟ್ಯೂನ್ ಹಾಗೂ ರಶ್ಮಿಕಾ- ರ್ಧರುವ ಕೆಮಿಸ್ಟ್ರಿ.

ಅದೇನೇ ಇರಲಿ, ಕೆಡಿ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ಹಣ ಹೂಡಿದ್ದು, ಭಾರತೀಯ ಚಿತ್ರರಂಗದ ಆರು ಮಂದಿ ಸೂಪರ್ ಸ್ಟಾರ್ಸ್​ ಈ ಚಿತ್ರದಲ್ಲಿ ಕಾಣಸಿಗಲಿದ್ದಾರೆ. ಜೋಗಿ ಪ್ರೇಮ್ ಆ್ಯಕ್ಷನ್ ಕಟ್​ನಲ್ಲಿ ಜೋಗಿ, ಕರಿಯ ಶೈಲಿಯ ಸಿನಿಮಾ ಇದಾಗಿರಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಲ್​ಚಲ್ ಎಬ್ಬಿಸಿದೆ. ಒಟ್ಟಾರೆ ಧ್ರುವ ಗತ್ತು, ಗಮ್ಮತ್ತು ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತಾಗೋ ಹೊತ್ತಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES