Thursday, November 7, 2024

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಗಂಡಾಂತರಕ್ಕೆ ಕೊನೆಗೂ ಮುಕ್ತಿ ಸಿಗುತ್ತಾ..?

ಬೆಂಗಳೂರು: ಈಗಾಗಲೇ ಬೆಂಗಳೂರಿನ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ಗುಂಡಿಗಳಿಂದ ಸಾಕಷ್ಟು ಅವಾಂತರವಾಗಿ. ಕಳೆದವಾರ ಯಲಹಂಕದಲ್ಲಿ ರಸ್ತೆಗುಂಡಿಗೆ ಒರ್ವ ಬಲಿಯಾಗಿರುವುದು ಬಿಬಿಎಂಪಿ ವಿರುದ್ದ ಜನರ ಆಕ್ರೋಶ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು ನವೆಂಬರ್-10 ಕ್ಕೆ ರಸ್ತೆ ಗುಂಡಿ ಮುಚ್ಚಲು ಡೆಡ್ಲೈನ್ ನೀಡಿರುವ ಹಿನ್ನಲೆಯಲ್ಲಿ, ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಯಿಸುತ್ತಾರ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಬವವಾಗಿದೆ. ಹಾಗಾದರೆ ನವೆಂಬರ್10 ರಿಂದ ಗುಂಡಿ ಮುಕ್ತ ಬೆಂಗಳೂರು ಆಗುತ್ತಾ..? ಹಾಗೂ ಕಮಿಷನರ್ ತುಷಾರ್ ಗಿರಿನಾಥ್ ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡ್ತಾರಾ ಇಂಜಿನಿಯರ್ಸ್..?
ನವೆಂಬರ್10 ರೊಳಗೆ ಗುಂಡಿ ಮುಚ್ಚಿಲ್ಲ ಅಂದರೆ ಇಂಜಿನಿಯರ್ಸ್​ಗಳಿಗೆ ಕಮಿಷನರ್ ತುಷಾರ್ ಗಿರಿನಾಥ್ ರವರು ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನು  ರಸ್ತೆಗುಂಡಿಗಳಿಂದ ಸಾಲು ಸಾಲು ಅವಘಡ ನಡೆದಿದ್ರೂ ಎಚ್ಚೆತ್ತುಕೊಳ್ಳದ ಪಾಲಿಕೆ, ಇದೀಗ ನವೆಂಬರ್10 ರೊಳಗೆ ರಸ್ತೆ ಗುಂಡಿ ಮುಚ್ಚಲು ಗಡುವು ನೀಡಿರೋ ಬಿಬಿಎಂಪಿ ಕಮಿಷನರ್ ರವರ ಆದೇಶವನ್ನು ಪಾಲಿಸುತ್ತಾರ ಎಂದು ಕಾದುನೋಡಬೇಕಾಗಿದೆ.

RELATED ARTICLES

Related Articles

TRENDING ARTICLES