ಬೆಂಗಳೂರು: ಸಚಿವ ವಿ ಸೋಮಣ್ಣ ಮಗ ಅರೂಣ್ ಸೋಮಣ್ಣ ಹಾಗೂ ನಟ ಸೃಜನ್ ಲೋಕೆಶ್ ಟೀಮ್ ಜೊತೆಗೆ ಗಲಾಟೆ. ಸೋಮವಾರ ರಾತ್ರಿ ಬೆಂಗಳೂರಿನ ಮುದ್ದಿನ ಪಾಳ್ಯದ ಕಿಂಗ್ಸ್ ಕ್ಲಬ್ನಲ್ಲಿ ಘಟನೆ ನಡೆದಿದೆ.
ಅಪ್ಪು ಕಪ್ ( ಬ್ಯಾಡ್ಮಿಂಟನ್ ಟೂರ್ನಮೆಂಟ್) ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿತ್ಯ ಪ್ರಾಕ್ಟಿಸ್ ನಡೆಸುತ್ತಿರೊ ಸೃಜನ್ ಲೋಕೇಶ್ ಟೀಮ್. ಈ ಹಿನ್ನಲೆ ಪ್ರಾಕ್ಟೀಸ್ ಮುಗಿದ ಬಳಿಕ ರಾತ್ರಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡುವ ವೇಳೆ ಏರು ದ್ವನಿಯಲ್ಲಿ ಕಿರುಚಾಡುತ್ತಿದ್ದ ಟೀಮ್.
ಈ ವೇಳೆ ಅರೂಣ್ ಸೋಮಣ್ಣ ಮತ್ತೆ ಕ್ಲಬ್ ಗೆ ಬಂದಿದ್ದಾರೆ. ಯಾಕೆ ಜೋರಾಗಿ ಗಲಾಟೆ ಮಾಡ್ತಿರಾ ಎಂದು ಕೇಳಿದ್ದ ಅರೂಣ್ ಸೋಮಣ್ಣ. ಈ ವೇಳೆ ಎರಡೂ ಗುಂಪಿನ ನಡುವೆ ಗಲಾಟೆ.ಮಾತು ಮಾತಿಗೆ ಶುರುವಾಗಿ ನಂತ್ರ ಹೊಡೆದಾಟ. ಪರಸ್ಪರ ಎರಡೂ ಟೀಮ್ ನವರು ಹೊಡೆದಾಡಿಕೊಂಡಿದ್ದಾರೆ.ಘಟನೆಯಲ್ಲಿ ಸೃಜನ್ ಲೋಕೇಶ್, ಅರ್ಜುನ್ ಸೇರಿ ಹಲವಾರು ಜನರು ಇರುವ ಮಾಹಿತಿ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.