Wednesday, January 22, 2025

ಕಂಠ ಪೂರ್ತಿ ಕುಡಿದು ಕಿರುಚಾಡಿದ್ರಾ ಸೃಜನ್​ ಲೋಕೇಶ್​.?

ಬೆಂಗಳೂರು: ಪ್ರಭಾವಿ ವ್ಯಕ್ತಿಗಳು ಪಬ್ಲಿಕ್​ನಲ್ಲಿ ಕಿತ್ತಾಡಿಕೊಂಡ್ರೆ ಸುದ್ದಿಯಾಗೋದು ತಡವೇನಲ್ಲ. ಜನಪ್ರೀಯ ಸಚಿವರಾದ ವಿ. ಸೋಮಣ್ಣ ಅವ್ರ ಪುತ್ರ ಅರುಣ್ ಸೋಮಣ್ಣ ಹಾಗೂ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ಸೃಜನ್ ಲೋಕೇಶ್ ರಾತ್ರಿ ಪಾರ್ಟಿಯಲ್ಲಿ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ಸೋಮವಾರ ರಾತ್ರಿ ಅಪ್ಪು ಬ್ಯಾಡ್ಮಿಂಟನ್ ಟೂರ್ನಿಗಾಗಿ ನೆಟ್ ಪ್ರಾಕ್ಟೀಸ್ ಮಾಡಲು ಮುದ್ದೇನಹಳ್ಳಿಗೆ ಸೃಜನ್ ಲೋಕೇಶ್ ಅಂಡ್ ಟೀಮ್ ಹೋಗಿದೆ. ಈ ವೇಳೆ ತಡರಾತ್ರಿ ಪ್ರಾಕ್ಟೀಸ್ ಮುಗಿಸಿ ಕಂಠ ಪೂರ್ತಿ ಕುಡಿದು ಜೋರಾಗಿ ಕೇಕೆ ಹಾಕಿದ್ದಾರೆ ಎನ್ನಲಾಗ್ತಿದೆ. ಮೋಜು-ಮಸ್ತಿ ಪಾರ್ಟಿ ಜೋರಾಗಿದ್ದು, ಅದನ್ನು ಪ್ರಶ್ನೆ ಮಾಡಿದ ಅರುಣ್ ಸೋಮಣ್ಣ ವಿರುದ್ಧ ಹರಿಹಾಯ್ದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕ್ಲಬ್‌ನಲ್ಲಿ ಪಾರ್ಟಿ ಮಾಡ್ತಿದ್ದ ವೇಳೆಯ ಅರುಣ್ ಸೋಮಣ್ಣ ಟೀಮ್ ಅಲ್ಲಿಗೆ ಬಂದಿದೆ. ಕಿರುಚಾಡಬೇಡಿ ಎಂದು ಪ್ರಶ್ನೆ ಮಾಡಿದವರ ಮೇಲೆಯೇ ಗಲಾಟೆ ಬಿದ್ದಿದ್ದು, ಹೊಡೆದಾಟ ಕೂಡ ಜೋರಾಗಿ ನಡೆದಿದೆ ಎನ್ನಲಾಗ್ತಿದೆ. ಆದ್ರೆ, ಈ ವಿಚಾರವಾಗಿ ಕ್ಲಬ್​ನ ಮಾಲೀಕರಾಗಲಿ, ಅರುಣ್‌, ಸೃಜನ್ ಲೋಕೇಶ್ ಆಗಲಿ ದೂರು ನೀಡಿಲ್ಲ. ಈ ವಿಚಾರವಾಗಿ ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸ್ತಿದ್ದಾರೆ.

ಇನ್ನೂ ಈ ಬಗ್ಗೆ ಟ್ವೀಟ್​ ಮಾಡಿದ ಅರುಣ್​ ಸೋಮಣ್ಣ, ಚುನಾವಣೆ ಸಮೀಪಿಸುತ್ತಿದೆ. ನಮ್ಮ ತಂದೆಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ವಿರೋಧಿಗಳನ್ನು ಕಂಗೆಡಿಸಿವೆ. ಇದರಿಂದ ಹತಾಶೆಗೊಂಡಿರುವ ರಾಜಕೀಯ ವಿರೋಧಿಗಳು ಕುಂತಂತ್ರದ ಮೂಲಕ‌ ತಂದೆಯವರಿಗೆ ಕೆಟ್ಟ ಹೆಸರು ತರಲು ಈ ರೀತಿಯ ಪ್ರಯತ್ನ ನಡೆಯುತ್ತಿರಬಹುದು ಎಂದಿದ್ಧಾರೆ.

ಅದೇನೆ ಇರಲಿ ಇದು ಸತ್ಯವೇ ಆಗಿದ್ದಲ್ಲಿ, ಪಬ್ಲಿಕ್​ನಲ್ಲಿ ಅಸಭ್ಯವಾಗಿ ವರ್ತಿಸಿರೋದು ಸರಿ ಅಲ್ಲ. ಪ್ರಸ್ತುತ ಸಮಾಜದಲ್ಲಿ ಸಾಮಾಜಿಕವಾಗಿ ಗುರುತಿಸಿಕೊಂಡವರೇ, ತಿದ್ದಿ ಬುದ್ಧಿ ಹೇಳಬೇಕಾದ ಪ್ರಭಾವಿ ವ್ಯಕ್ತಿಗಳ ಮಕ್ಕಳೇ ಈ ರೀತಿ ಹಾದಿ ತಪ್ಪಿರೋದು ವಿಪರ್ಯಾಸ.

– ರಾಕೇಶ್ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES