ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ವಿಚಾರ. ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು ದಾಖಲಿಸಿದೆ.ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಯತ್ನಾಳ.ಇಲ್ಲಿವರೆಗೆ ಯಾವ ಪಕ್ಷವೂ ಇಷ್ಟು ಸ್ಥಾನ ಗೆದ್ದಿಲ್ಲಾ.
ಬಿಜೆಪಿ 35 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗೆದ್ದಿದೆ.ಕಳೆದ ಬಾರಿಗಿಂತ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದೇವೆ.ಅಭಿವೃದ್ದಿ ಹಾಗೂ ಹಿಂದುತ್ವವನ್ನು ಜನರು ಒಪ್ಪಿದ್ದಾರೆ. ಕೆಲವು ಕಡೆ ಕಡಿಮೆ ಮತಗಳ. ಅಂತರದಿಂದ ಮೂರು ಸ್ಥಾನಗಳಲ್ಲಿ ಸೋತಿದ್ದೇವೆ. ನಿನ್ನೆ ಓರ್ವ ಪಕ್ಷೇತರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮತ್ತಿಬ್ಬರು ಪಕ್ಷೇತರರು ಬಿಜೆಪಿಗೆ ಸೇರಲಿದ್ದಾರೆ.
ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ರನ್ನು ಮುಲಾಜಿಲ್ಲದೇ ಬಿಜೆಪುಯವರನ್ನೇ ಮಾಡುತ್ತೇವೆ. ನಮ್ಮ ವಿಕಾಸ, ಹಿಂದುತ್ವ ಬಿಜೆಪಿ ಹಾಗೂ ಮೋದಿ ಅವರ, ಸಿಎಂ ಬೊಮ್ಮಾಯಿ ಅವರು ಸಹ ಗೆಲುವಿಗೆ ಕಾರಣ. ಬಿಜೆಪಿಗೆ ಬೆಂಬಲ ನೀಡಿದ್ದಕ್ಕೆ ನಗರದ ಜನರಿಗೆ ಅಭಿನಂದನೆ ಸಲ್ಲಿಸೋದಾಗಿ ಹೇಳಿದ ಯತ್ನಾಳ. ಗೆಲುವಿನ ಬಗ್ಗೆ ಸಿಎಂ ಸಹ ಅಭಿನಂದನೆ ಸಲ್ಲಿಸಿದ್ದಾರೆ. ಕೆಲವು ಲೀಡರ್ ಗಳು ಮನೆಯಲ್ಲಿ ಕುಳಿತು ಕುತಂತ್ರ ಮಾಡಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿದ್ದ ಕೆಲ ಕಳ್ಳರ ಗ್ಯಾಂಗ್ ಗೆ ಬೆಂಗಳೂರು ಮುಧೋಳದಿಂದ ಸಾಕಷ್ಟು ಸಹಾಯ ಹಸ್ತ ಬಂದಿತ್ತು. ಬಿಜೆಪಿ ಸೋಲಿಸಿ ಯತ್ನಾಳ ಮಣಿಸಬೇಕೆಂದುಕೊಂಡಿದ್ದರು. ಆದರೆ ಜನರು ಹುಚ್ಚರಿಲ್ಲಾ, ಉತ್ತರ ಕೊಟ್ಟಿದ್ದಾರೆ.ಇನ್ನು ಮೇಲಾದರೂ ನಿವೃತ್ತಿಯಾಗಿ ಮನೆಯಲ್ಲಿ ಆರಾಮವಿರಬೇಕು ಎಂದು ವಿಜಯಪುರದಲ್ಲಿ ಶಾಸಕ ಯತ್ನಾಳ ಹೇಳಿಕೆ ನೀಡಿದ್ದಾರೆ.