Sunday, December 22, 2024

ಬಿಜೆಪಿ: ಮಾಜಿ ಸಚಿವ ಜನಾರ್ಧನರೆಡ್ಡಿ ಅಸಮಾಧಾನ

ಬಳ್ಳಾರಿ: ಬಿಜೆಪಿ ವಿರುದ್ದ ಮಾಜಿ ಸಚಿವ ಜನಾರ್ಧನರೆಡ್ಡಿ ಅಸಮಾಧಾನ ವಿಚಾರ, ಈ ಕುರಿತು ಬಳ್ಳಾರಿಯಲ್ಲಿ ರೆಡ್ಡಿ ಸ್ನೇಹಿತ ಹಾಗೂ ಸಚಿವ ಬಿ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಜನಾರ್ಧನರೆಡ್ಡಿ ಅವರು ನಮ್ಮ ನಾಯಕರು. ಯಾವ ಕಾರಣಕ್ಕೆ ಹೇಳಿಕೆ ನೀಡಿದ್ದಾರೆ ಅನ್ನೋದು ಗೊತ್ತಿಲ್ಲ. ಈ ಬಗ್ಗೆ ನಾನು ಜನಾರ್ಧನರೆಡ್ಡಿ ಜೊತೆ ಮಾತನಾಡುವೆ. ರೆಡ್ಡಿ ಅವರ ಅಸಮಾಧಾನದ ಬಗ್ಗೆ ಪಕ್ಷದ ವರಿಷ್ಠರ ಜೊತೆ ಮಾತನಾಡುವೆ. ಜನಾರ್ಧನರೆಡ್ಡಿ ಅವರು ಬಿಜೆಪಿ ಪಕ್ಷವನ್ನು ಕಟ್ಟಿದವರು. ಅವರಿಗೆ ಮುಜುಗರ ತರುವ ಕೆಲಸವನ್ನು ಯಾರೂ ಮಾಡುವುದಿಲ್ಲ. ಅವರು ಮೊದಲಿನಿಂದಲೂ ಬಿಜೆಪಿ ಪಕ್ಷದ ಜೊತೆಗೆ ಇದ್ದಾರೆ.

ಜನಾರ್ಧನರೆಡ್ಡಿ ಅವರು ಸಕ್ರಿಯ ರಾಜಕೀಯಕ್ಕೆ ಬರಬೇಕು ಅನ್ನೋದು ಎಲ್ಲರ ಇಚ್ಛೆ, ನವೆಂಬರ್ 20 ರಂದು ಬಳ್ಳಾರಿಯಲ್ಲಿ ಬೃಹತ್ ಎಸ್ ಟಿ ಸಮಾವೇಶ ನಡೆಯಲಿದೆ. ಬಳ್ಳಾರಿ ಹೊರವಲಯದಲ್ಲಿ ನೂರು ಎಕರೆ ಜಮೀನಿನಲ್ಲಿ ಸಮಾವೇಶ ನಡೆಯಲಿದೆ. ನಿರೀಕ್ಷೆಗೂ ಮೀರಿ ಜನರು ಸೇರುವ ನಿರೀಕ್ಷೆ ಇದೆ. ಎಸ್​ಟಿ ಸಮಾವೇಶಕ್ಕೆ ಕೇಂದ್ರ ನಾಯಕರನ್ನ ಕರೆಯಿಸುವ ಚಿಂತನೆ ಇದೆ.

ಈ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚೆ ನಡೆಸಲಾಗಿದೆ. ಸಮಾವೇಶದ ಜಾಗದಲ್ಲಿ ಇವತ್ತು ಪೂಜೆ ನೇರವೇರಿಸಲಾಗುವುದು. ಎಸ್​ಸಿಎಸ್​ಟಿ ಮೀಸಲಾತಿ ಹೆಚ್ಚಳದ ಕ್ರೆಡಿಟ್ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಮೀಸಲಾತಿ ಹೆಚ್ಚಳಕ್ಕಾಗಿ ಕಳೆದ ನಾಲ್ಕು ದಶಕಗಳ ಹೋರಾಟ
ಯಾವ ಸರ್ಕಾರಗಳು ಮೀಸಲಾತಿ ಹೆಚ್ಚಳ ಮಾಡಲಿಲ್ಲ.ನನಗೆ ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಇತ್ತು, ಶ್ರೀರಾಮುಲು ಮೀಸಲಾತಿ ಕೊಡಿಸಲು ಆಗುವುದಿಲ್ಲ ಅಂತಾ ಟೀಕೆ ಮಾಡಿದ್ದರು. ಆದರೆ ಶ್ರೀರಾಮುಲು ಬೇರೆಯವರ ಟೀಕೆಗೆ ತಲೆಕೆಡಿಸಿಕೊಳ್ಳಲಿಲ್ಲ. ಬಳ್ಳಾರಿಯಲ್ಲಿ ಫೈಲ್ವಾನ್ ರಂಜಾನ್ ಸಾಬ್ ಹಾಗೂ ಪುನಿತ್ ರಾಜ್ ಕುಮಾರ್ ಪುತ್ಥಳಿಯನ್ನು ಅನಾವರಣವಾಗಲಿದೆ. ಈಗಾಗಲೇ ಪುತ್ಥಳಿ ನಿರ್ಮಾಣ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES