Monday, December 23, 2024

ನವೆಂಬರ್ 25ಕ್ಕೆ ಸೂಪರ್ ಹಿಟ್ ಕಾಂಬೋ ‘ಸ್ಪೂಕಿ ಕಾಲೇಜ್’

ಇತ್ತೀಚೆಗೆ ನಮ್ಮ ಸ್ಯಾಂಡಲ್​ವುಡ್ ಅಂಗಳದಲ್ಲಿ ಹಾರರ್ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಆ ಕೊರಗನ್ನ ನೀಗಿಸೋಕೆ ಅಂತ ಸ್ಪೂಕಿ ಕಾಲೇಜ್ ಅಡ್ಮಿಷನ್ಸ್ ಆರಂಭಿಸಲಿದೆ. ಸಿಂಗಲ್ ಟೀಸರ್​ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ಸ್ಪೂಕಿ ಕಾಲೇಜ್, ರಿಲೀಸ್ ಡೇಟ್​ನ ಅನೌನ್ಸ್ ಮಾಡಿದೆ.

  • ಧಾರವಾಡದ ಹೆರಿಟೇಜ್ ಬಿಲ್ಡಿಂಗ್​ನಲ್ಲಿ ದಿಯಾ ಖುಷಿ, ವಿವೇಕ್
  • ಮತ್ತೆ ಹೊಸ ಡೈರೆಕ್ಟರ್ ಕೈ ಹಿಡಿದ ರಂಗಿತರಂಗ ಪ್ರೊಡ್ಯೂಸರ್..!

ಕನ್ನಡ ಸಿನಿಮಾಗಳ ಮೇಕಿಂಗ್ ಕ್ವಾಲಿಟಿ ಹಾಗೂ ಕಂಟೆಂಟ್ ಎಲ್ಲೆಲ್ಲೂ ಟಾಕ್ ಆಫ್ ದಿ ಟೌನ್. ಕಾರಣ ಈ ವರ್ಷ ನಮ್ಮ ಸ್ಯಾಂಡಲ್​ವುಡ್ ನೀಡಿದಷ್ಟು ಹಿಟ್ಸ್ ಬೇರಾವ ಇಂಡಸ್ಟ್ರಿ ನೀಡಿಲ್ಲ. ಸದ್ಯ ಸ್ಪೂಕಿ ಕಾಲೇಜ್ ಅನ್ನೋ ಸಿನಿಮಾ ಇದೇ ನವೆಂಬರ್ 25ಕ್ಕೆ ತೆರೆಗೆ ಬರೋಕೆ ಸಜ್ಜಾಗಿದ್ದು, ರಿಲೀಸ್ ಡೇಟ್ ಜೊತೆ ಟ್ರೈಲರ್ ಲಾಂಚ್ ಡೇಟ್​ನ ಸುಳಿವು ನೀಡಿದೆ.

ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಜಾನರ್​ನ ಈ ಸಿನಿಮಾ, ಕನ್ನಡ ಇಂಡಸ್ಟ್ರಿಯಲ್ಲಿ ಮತ್ತೆ ಹಾರರ್ ಚಿತ್ರಗಳ ಜಮಾನ ಸೃಷ್ಟಿಸೋಕೆ ತುದಿಗಾಲಲ್ಲಿ ನಿಂತಿದೆ. ಯೋಗರಾಜ್ ಭಟ್, ರಮೇಶ್ ಅರವಿಂದ್ ಜೊತೆ ಕೆಲಸ ಮಾಡಿರೋ ಅನುಭವ ಇರೋ ಭರತ್, ಮುಂಬೈನಲ್ಲಿ ಒಂದಷ್ಟು ಌಡ್ ಫಿಲ್ಮ್​ಗಳನ್ನ ಮಾಡಿದ್ರು. ಇದೀಗ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸೀಲ್ ಹಾಕ್ತಿದ್ದಾರೆ.

ಇನ್ನು ಬ್ಲಾಕ್ ಬಸ್ಟರ್ ಹಿಟ್ ದಿಯಾ ಫೇಮ್ ಖುಷಿ ಈ ಚಿತ್ರದ ಲೀಡ್​ನಲ್ಲಿ ಕಾಣಸಿಗಲಿದ್ದು, ಪ್ರೀಮಿಯರ್ ಪದ್ಮಿನಿ ಚಿತ್ರದಿಂದ ಲೈಮ್​ಲೈಟ್​ಗೆ ಬಂದಂತಹ ವಿವೇಕ್ ಸಿಂಹ ನಾಯಕನಟನಾಗಿ ಬಣ್ಣ ಹಚ್ಚಿದ್ದಾರೆ. ಸಿದ್ಲಿಂಗು ಶ್ರೀಧರ್, ವಿಜಯ್ ಚೆಂಡೂರು ಸೇರಿದಂತೆ ಸಾಕಷ್ಟು ಹಿರಿಯ ಕಲಾವಿದರ ಬಳಗ ಚಿತ್ರದಲ್ಲಿದ್ದು, ಧಾರವಾಡದ ಹೆರಿಟೇಜ್ ಬಿಲ್ಡಿಂಗ್​, ದಾಂಡೇಲಿಯಲ್ಲಿ ಚಿತ್ರಿಸಿದ್ದಾರೆ.

ಹಾಲಿವುಡ್ ಸಿನಿಮಾದ ಶೈಲಿಯಲ್ಲಿರೋ ಈ ಸಿನಿಮಾದ ಟೀಸರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಟೆಕ್ನಿಕಲಿ ಸ್ಟ್ರಾಂಗ್ ಅನಿಸಿದೆ. ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರಗಳ ನಿರ್ಮಾಪಕರಾದ ಹೆಚ್​.ಕೆ. ಪ್ರಕಾಶ್ ಇದಕ್ಕೆ ಬಂಡವಾಳ ಹೂಡಿದ್ದು, ಅವ್ರ ಪ್ರೊಡಕ್ಷನ್ ವ್ಯಾಲ್ಯೂಸ್ ಪ್ರತಿ ಫ್ರೇಮ್​ನಲ್ಲಿ ಎದ್ದು ಕಾಣ್ತಿವೆ.

ಸದಾ ಹೊಸ ಪ್ರತಿಭೆಗಳಿಗೆ ಅವಕಾಶ ನೀಡೋ ಹೆಚ್. ಕೆ ಪ್ರಕಾಶ್, ಈ ಬಾರಿಯೂ ಕೂಡ ನಿರ್ದೇಶಕ ಭರತ್​ಗೆ ಡೈರೆಕ್ಟರ್ ಹಾಗೂ ನಟ ವಿವೇಕ್ ಸಿಂಹಗೆ ಹೀರೋ ಪಟ್ಟ ಕೊಡ್ತಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಕರುನಾಡ ಚಕ್ರವರ್ತಿಯಿಂದ ಟ್ರೈಲರ್ ಲಾಂಚ್ ಆಗಲಿದ್ದು, ಅದಾದ ಬಳಿಕ ಮೆಲ್ಲುಸಿರೆ ಸವಿಗಾನ ರೀಮಿಕ್ಸ್ ಸಾಂಗ್ ರಿಲೀಸ್ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES