ಚಾಮರಾಜನಗರ: ಇಂದು ಕನ್ನಡ ರಾಜ್ಯೋತ್ಸವದ ಹಿನ್ನೆಲೆ, ಗಡಿಜಿಲ್ಲೆಯಲ್ಲಿ ಜನರಿಲ್ಲದ ರಾಜ್ಯೋತ್ಸವ ನಡೆಯುತ್ತಿದೆ.ಕಳೆದ ವಾರವಷ್ಟೇ ಚಾಮರಾಜನಗರ ಜಿಲ್ಲೆಯಲ್ಲಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದ ಸಚಿವ ಸೋಮಣ್ಣ ಸಮಕಷ್ಟಕ್ಕೆ ಸಿಲುಕಿದ್ದರು.
ಇನ್ನು ಈ ಕಾರ್ಯಕ್ರಮದ ಸುತ್ತ ಪೊಲೀಸ್ ಬಿಗಿ ಬಂದುಬಸ್ತ್ ಮಾಡಿದ ಜಿಲ್ಲಾಡಳಿತ. ಈ ಹಿನ್ನೆಲೆಯಲ್ಲಿ, ಕಾರ್ಯಕ್ರಮಕ್ಕೆ ಬರುವವರ ಪ್ರತಿಯೊಬ್ಬರ ತಪಾಸಣೆ ಮಾಡಿದ ಪೊಲೀಸರು. ಇದೇ ಮೊದಲ ಬಾರಿಗೆ ಕಾರ್ಯಕ್ರಮವನ್ನು ಜಿಲ್ಲಾ ಕ್ರೀಡಾಂಗಣದಿಂದ ಪೊಲೀಸ್ ಕವಾಯತು ಮೈದಾನಕ್ಕೆ ಸ್ಥಳಾಂತರ ಮಾಡಿದ ಜಿಲ್ಲಾಡಳಿತ.
ರೈತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಗಳು ಸೋಮಣ್ಣ ರಾಜೀನಾಮೆಗೆ ಆಗ್ರಹಿಸಿದ ಹಿನ್ನಲೆಯಲ್ಲಿ, ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದ ಸಂಘಟನೆಗಳು. ಸಚಿವ ಸೋಮಣ್ಣಗೆ ಭಾರೀ ಭದ್ರತೆ ಎಫೆಕ್ಟ್ನಿಂದಾಗಿ ಗಡಿಜಿಲ್ಲೆಯಲ್ಲಿ ಜನರಿಲ್ಲದ ರಾಜ್ಯೋತ್ಸವ ನಡೆಯಲಿದೆ. ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ರಾಜ್ಯೋತ್ಸವ ಆಯೋಜಿಸಿದ್ದು ಧ್ವಜಾರೋಹಣಕ್ಕೆ ಸಚಿವ ಸೋಮಣ್ಣ ಆಗಮಿಸಿರುವುದರಿಂದ ಕಪಾಲಮೋಕ್ಷ ವಿವಾದ ಹಾಗೂ ರೈತರು ಆಕ್ರೋಶಗೊಂಡು ಅಹಿತಕರ ಘಟನೆ ನಡೆಸಬಹುದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಹಂತದಲ್ಲಿ ಪೊಲೀಸ್ ಸರ್ಪಗಾವಲನ್ನು ರೂಪಿಸಲಾಗಿದೆ.