Wednesday, January 22, 2025

ಅಪ್ಪು ದೇವರ ಮಗು, ಸ್ವಲ್ಪ ದಿನ ಆಟವಾಡಿ ದೇವರ ಹತ್ತಿರ ಹೋಗಿದ್ದಾನೆ; ರಜನಿ ಕಾಂತ್​​

ಬೆಂಗಳೂರು; ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡುತ್ತಿರುವ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ವಿಧಾನಸೌಧದಲ್ಲಿ ನಡೆಯುತ್ತಿದೆ.

ಈ ಕಾರ್ಯಕ್ರಮಕ್ಕೆ ತಮಿಳು ನಟ ಸೂಪರ್​ ಸ್ಟಾರ್​ ರಜನಿ ಕಾಂತ್​ ಆಗಮಿಸಿ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿ ಸಮ್ಮುಖದಲ್ಲಿ ನಡೆಯುತ್ತಿದೆ 6 ಕೋಟಿ ಜನ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಎಲ್ಲರೂ ಸಹೋದರರಾಗಿ ಒಂದಾಗಿ ಇರಬೇಕೆಂದು ಆ ತಾಯಿ ರಾಜೇಶ್ವರಿ, ಅಲ್ಲಾ, ಜೀಸಸ್​ ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಕನ್ನಡದಲ್ಲಿ ಮಾತನಾಡಿದರು.

ಈ ಕಲಿಯುಗಕ್ಕೆ ಅಪ್ಪು ಅವರು ದೇವರ ಮಗು. ಅಪ್ಪು ಬಂದು ಸ್ವಲ್ಪದಿನ ಇದ್ದು ಆಟ ಹಾಡಿ ದೇವರ ಹತ್ತಿರ ಹೋಗಿದ್ದಾರೆ. ಇದೇ ಜಾಗದಲ್ಲಿ ಅಪ್ಪು ಅವರ ಅಪ್ಪ ರಾಜ್​ಕುಮಾರ್​ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನ ಪ್ರಧಾನ ಮಾಡಿದ್ದರು ಎಂದು ರಜನಿ ಹೇಳಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಮಳೆ ಬಂದಿದ್ದರಿಂದ ರಜನಿ ಭಾಷಣಕ್ಕೆ ಮಳೆ ಅಡ್ಡಿಯಾಯಿತು.

RELATED ARTICLES

Related Articles

TRENDING ARTICLES