ವಿಜಯಪುರ: ಇಂದು ಎಲ್ಲೆಡೆ 67ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಇನ್ನು ವಿಜಯಪುರಅದಲ್ಲಿ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಭಿನ್ನವಾಗಿ ಆಚರಣೆ ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದಲ್ಲಿ ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವ ಆಚರಣೆ. ರಂಗೋಲಿಯಲ್ಲಿ ಅರಳಿದ ಅಪ್ಪು. ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವ ಹಿನ್ನಲೆ. ನಾಲತವಾಡ ಪಟ್ಟಣದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ.
ಅಪ್ಪು ಅಭಿಮಾನಿಗಳಿಂದ ರಂಗೋಲಿ ಬಿಡಿಸಿ ಆಚರಣೆ. ಪವರ್ ಸ್ಟಾರ್ ಕನ್ನಡ ರಾಜ್ಯೋತ್ಸವ -2022 ಎಂದು ಬರಹ ಬರೆದಿರುವ ಅಭಿಮಾನಿಗಳು. ನಾಡಗೀತೆ ಹಾಗೂ ಪುನೀತ್ ರಾಜ್ ಸಿನೇಮಾ ಹಾಡುಗಳ ಝೇಂಕಾರ ಮೊಳಗಿದೆ.