Saturday, January 11, 2025

ಕಾಂಗ್ರೆಸ್‍ನವರ 40% ಕಮೀಷನ್ ಆರೋಪ ಸುಳ್ಳು : ನಳಿನ್ ಕುಮಾರ್ ಕಟೀಲ್

ಹುಬ್ಬಳ್ಳಿ : ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವವರು ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟ್‍ರು, ಇದೆಲ್ಲ ಕಾಂಗ್ರೆಸ್ ಏಜೆಂಟರ್‌ಗಳ ಕಥೆ, ಇದು ಸಿದ್ದರಾಮಣ್ಣನ ಒಳ ತಂತ್ರಗಾರಿಕೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಭ್ರಷ್ಟಾಚಾರದ ಸಾಕ್ಷಿ ಪುರಾವೆ ಕೊಡಿ, ಇಲ್ಲವೇ ಲೋಕಾಯುಕ್ತಕ್ಕೆ ದೂರು ಕೊಡಿ. ಕೇವಲ ಮಾಧ್ಯಮದವರ ಮುಂದೆ ಮಾತನಾಡುವುದಲ್ಲ, ಕಾಂಗ್ರೆಸ್ ಲೋಕಾಯುಕ್ತದ ಜೀವ ತೆಗೆದಿತ್ತು, ನಾವು ಓಪನ್ ಮಾಡಿಸಿದ್ದೇವೆ ಕೇಸ್ ಕೊಡಿ. ಸಿದ್ದರಾಮಯ್ಯ ಫೈಲ್ ನನ್ನ ಬಳಿ ಇವೆ. ನಾವೆಲ್ಲ ದಾಖಲೆ ಸಂಗ್ರಹ ಮಾಡುತ್ತೇವೆ. ಸಮಯ ಬರಲಿ ನಾವು ತೋರಿಸುತ್ತೇವೆ. ದಾಖಲೆ ಇಟ್ಟುಕೊಂಡು ನಾವು ಹೋಗುತ್ತೇವೆ ಎಂದಿದ್ದಾರೆ.

ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ವಿಜಯಪುರ, ಕೊಳ್ಳೆಗಾಲದಲ್ಲಿ ಸೇರಿದಂತೆ ಅತೀ ಹೆಚ್ಚು ಬಿಜೆಪಿ ಗೆದ್ದಿದೆ. ಮತದಾರರಿಗೆ ಕಾರ್ಯಕರ್ತರಿಗೆ ಅಭಿನಂದನೆಗಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಡಳಿತವನ್ನು ಜನ ಮೆಚ್ಚಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಇದು ಮುಂದಿನ ಚುನಾಚಣೆಗೆ ದಿಕ್ಸೂಚಿ ಎಂದು ಹೇಳಿದ್ದಾರೆ. ಕಾಂಗ್ರೆಸ್‍ನವರ 40% ಕಮೀಷನ್ ಆರೋಪ ಸುಳ್ಳು, ಇದನ್ನು ಜನ ನಂಬಿಲ್ಲ. ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದಲೆಲ್ಲಾ ನಮಗೆ ಹೆಚ್ಚು ಸ್ಥಾನ ಬಂದಿದೆ. ರಾಹುಲ್ ಗಾಂಧಿ ಬಂದರೂ ಜನ ಕಾಂಗ್ರೆಸ್ ಪುರಸ್ಕಾರ ಮಾಡಿಲ್ಲ. ಭಾರತ್ ಜೋಡೋ ಕಾಂಗ್ರೆಸ್‍ಗೂ ಎಫೆಕ್ಟ್ ಆಗಿಲ್ಲ, ಜನರ ಮನಸ್ಸಿನಲ್ಲೂ ಎಫೆಕ್ಟ್ ಆಗಿಲ್ಲ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES