ಬೆಂಗಳೂರು : ಕನ್ನಡ ರಾಜ್ಯೋತ್ಸವ ಅಂಗವಾಗಿ ಪ್ರಯಾಣಿಕರಿಗೆ ಮೆಟ್ರೋ ಸಿಹಿ ಸುದ್ದಿ ನೀಡಿದೆ. ಸದ್ಯ ಬೆಂಗಳೂರು ಮೆಟ್ರೋದಲ್ಲಿ ಟೋಕನ್ ಹಾಗೂ ಸ್ಮಾರ್ಟ್ ಕಾರ್ಡ್ ತೆಗೆದುಕೊಳ್ಳಬೇಕು ಅಂತ ಉದ್ದುದ್ದ ಸಾಲಿನಲ್ಲಿ ನಿಂತುಕೊಳ್ಳಬೇಕು. ಆದ್ರೆ ಮಂಗಳವಾರದಿಂದ ಇಂತಹ ಕಿರಿಕಿರಿ ಇರೋದಿಲ್ಲ. ನಿಮ್ಮ ಮೊಬೈಲ್ ಮೂಲಕವೇ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಮೆಟ್ರೋ ನಿಗಮ ಮಾಡ್ತಿದೆ.ಪ್ರಯಾಣಿಕರು ತಮ್ಮ ಸ್ಮಾರ್ಟ್ ಪೋನ್ನಲ್ಲೇ ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ,ಮಾರ್ಗ ನಮೂದಿಸಿ ಟಿಕೆಟ್ ಪಡೆಯಬಹುದು.
ಇನ್ನು 2015ರ ಪೂರ್ವದಲ್ಲಿ ಅಳವಡಿಸಿದ ಎಎಫ್ಸಿ ಗೇಟ್ಗಳಲ್ಲಿ ಕ್ಯೂ ಆರ್ ಟಿಕೆಟ್ ವ್ಯವಸ್ಥೆಗೆ ಸ್ಪಂದಿಸುವುದಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚಲಾಗಿದೆ .ಹಳೆಯ ದ್ವಾರಗಳನ್ನು ಕ್ಯೂ ಆರ್ ವ್ಯವಸ್ಥೆಗೆ ಸ್ಪಂದಿಸುವಂತೆ ಸಾಫ್ಟ್ ವೇರ್ ಬದಲಿಸಲಾಗಿದೆ, ದೆಹಲಿ ಮೆಟ್ರೋ ಮಾದರಿಯಲ್ಲೇ ನಮ್ಮ ಮೆಟ್ರೋ ದಲ್ಲೂ ಟಿಕೆಟ್ ಜಾರಿ ಆಗ್ತಿದೆ.ಟೋಕನ್ ದರಕ್ಕಿಂತ 5 ರೂ ಕಡಿಮೆ ದರದಲ್ಲಿ QR ಟಿಕೆಟ್ ಲಭ್ಯವಾಗಲಿದೆ.
ಒಟ್ಟಿನಲ್ಲಿ ಕೊರೊನಾದಿಂದ ಪ್ರಯಾಣಿಕ ಸಂಖ್ಯೆ ಮೆಟ್ರೋ ದಲ್ಲಿ ಕುಸಿದಿದೆ.ಆದ್ರೆ ಇದೀಗ ಮತ್ತೆ ಪ್ರಯಾಣಿಕರನ್ನು ಸೆಳೆಯಲು ನಮ್ಮ ಮೆಟ್ರೋ ಈ ಹೊಸ ಪ್ಲಾನ್ ಪರಿಚಯಿಸಿದೆ. BMRCLನ ಈ ಪ್ಲಾನ್ ಎಷ್ಟರ ಮಟ್ಟಿಗೆ ಜನ ಸದ್ಭಳಕೆ ಮಾಡಿಕೊಳ್ಳಲಿದ್ದಾರೆ ಅನ್ನೋದನ್ನ ಕಾದುನೋಡಬೇಕಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.