Friday, December 27, 2024

ಮಹದೇಶ್ವರ ಬೆಟ್ಟದಲ್ಲಿ ಅಪಘಾತಕ್ಕೊಳಗಾದ ಕೆಎಸ್​ಆರ್​ಟಿಸಿ ಬಸ್

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದ ಆರನೇ ತಿರುವಿನಲ್ಲಿ ಸರ್ಕಾರಿ ಬಸ್ ಪಲ್ಟಿ ಹೊಡೆದಿದೆ.ಈ ಹಿನ್ನೆಲ್ಲೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಮಲಯಮಹದೇಶ್ವರ ಬೆಟ್ಟದಲ್ಲಿ ಪ್ರಯಾಣಿಕರನ್ನು ಪ್ರಯಾಣಿಸುತ್ತಿದ್ದ, ಕೆಎಸ್​ಆರ್​ಟಿಸಿ ಬಸ್ ಅಪಘಾತಕ್ಕೆ ಒಳಗಾಗಿದೆ. ಬಸ್​ನಲ್ಲಿದ್ದ ಹತ್ತಕ್ಕೂ ಹೆಚ್ಚು‌ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಸಾವು ಸಂಬಂವಿಸಿಲ್ಲ. ಇನ್ನು ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದ ಮಾರ್ಗಮಧ್ಯ ಘಟನೆ ನಡೆದಿದ್ದು, ಗಾಯಾಳುಗಳನ್ನ ಮಲೈಮಹದೇಶ್ವರ ಬೆಟ್ಟದ ಹಾಗೂ ಕಾಮಗೆರೆ ಆಸ್ಪತ್ರೆಗೆ ರವಾನೆ ಮಾಡಿಸಲಾಗಿದೆ.

ಅಪಘಾತ ನಡೆದ ಸ್ಥಳಕ್ಕೆ ಮಲೈಮಹದೇಶ್ವರ ಬೆಟ್ಟದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES