Wednesday, January 22, 2025

ಉತ್ತರಕರ್ನಾಟಕದಲ್ಲೂ ಕಾಣಿಸಿದ ಕೊರಗಜ್ಜ

ಹಾವೇರಿ : ಉತ್ತರ ಕರ್ನಾಟಕದಲ್ಲಿ ಸವದತ್ತಿ ಯಲ್ಲಮ್ಮ, ಮೈಲಾರ ಲಿಂಗೇಶ್ವರ, ದೇವರಗುಡ್ಡದ ಮಾಲತೇಶ ಸ್ವಾಮಿ ಭಕ್ತರೇ ಹೆಚ್ಚಿರುವ ಹಾವೇರಿ ಭಾಗದಲ್ಲಿ ಕೊರಗಜ್ಜ ಈಗ ಪವಾಡ ಸೃಷ್ಟಿಸಿದ್ದಾರೆ.ಹಾವೇರಿ ತಾಲೂಕು ಕೇರಿಮತ್ತಿಹಳ್ಳಿಯ ಯುವಕ ಫಕ್ಕಿರೇಶ ಮರಿಯಣ್ಣನವರ ಹೊಲದಲ್ಲಿ ಕೊರಗಜ್ಜ ದೈವ ಪ್ರತಿಷ್ಠಾಪನೆಯಾಗಿದೆ. ಉತ್ತರಕರ್ನಾಟಕದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದು, ವೈದ್ಯರಿಗೂ ಸವಾಲಾಗಿದ್ದ ಅನಾರೋಗ್ಯ ನಿವಾರಿಸಿದ ಕೊರಗಜ್ಜನ ಮಹಿಮೆಗೆ ಭಕ್ತರು ಬೆರಗಾಗಿದ್ದಾರೆ.

ಮಂಗಳೂರು ಬಳಿಯ ಕುತ್ತಾರುವಿನ ಕೊರಗಜ್ಜನಿಗೂ ಕೇರಿಮತ್ತಿಹಳ್ಳಿ ಗ್ರಾಮಕ್ಕೂ ಒಂದು ನಂಟು ಇದೆ.ಸುಮಾರು 40 ವರ್ಷಗಳ ಹಿಂದೆ ಕೊರಗಜ್ಜನ ಸೇವೆ ಮಾಡಿದ್ದ ಕೇರಿಮತ್ತಿಹಳ್ಳಿ ಗ್ರಾಮದ ವೃದ್ದೆ ಬಾಲಮ್ಮ ಕೊರಗಜ್ಜನ ಕೃಪೆಗೆ ಪಾತ್ರರಾಗಿದ್ದರು.ಕುತ್ತಾರುವಿಗೆ ತೆರಳಿ ಕೊರಗಜ್ಜನ ಸೇವೆ ಮಾಡಿದ್ದರು.ಈಗ ಮೃತ ಪಟ್ಟಿರೋ ಬಾಲಮ್ಮನ ಮೊಮ್ಮಗ ಫಕ್ಕಿರೇಶ ಮರಿಯಣ್ಣನವರ ಕನಸ್ಸಿನಲ್ಲಿ ಕಾಣಿಸಿಕೊಂಡಿದ್ದ ಕೊರಗಜ್ಜ,ತಮ್ಮನ್ನು ಕೇರಿಮತ್ತಿಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸುವಂತೆ ಸೂಚಿಸಿದ್ರಂತೆ.ಊರ ಹೊರಗೆ ಸಿಕ್ಕ ಕೊರಗಜ್ಜನ ಕಲ್ಲನ್ನೇ ತಂದು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗ್ತಿದೆ. ಕೊರಗಜ್ಜನದೇವಸ್ಥಾನದ ಉದ್ಘಾಟನೆ ಸಂದರ್ಭದಲ್ಲಿ ಕೋಲಾ ಸೇವೆ ಕೂಡಾ ನಡೆದಿದೆ.ಕರಾವಳಿಯ ರಘು ಅಜ್ಜನವರು ಬಂದು ಕೋಲಾ ಸೇವೆ ನಡೆಸಿದ್ದಾರೆ.

ಒಟ್ಟಾರೆಯಾಗಿ ಹಾವೇರಿಗೆ ಬಂದ ಕೊರಗಜ್ಜ ಸದ್ಯ ಭಕ್ತರ ಸಮಸ್ಯೆಗಳ ನಿವಾರಣೆಗೆ ಅಸ್ತು ಎಂದಿದ್ದಾನೆ.ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಇಷ್ಟೂ ದಿನ ಕರಾವಳಿ ಭಾಗದಲ್ಲಷ್ಟೇ ನಡೆಯುತ್ತಿದ್ದ ಕೊರಗಜ್ಜನ ಆರಾಧನೆ ಈಗ ಉತ್ತರಕರ್ನಾಟಕದಲ್ಲಿಯೂ ಹೊಸತನಕ್ಕೆ ಮುನ್ಮುಡಿಯಾಗಿದೆ.

ವೀರೇಶ ಬಾರ್ಕಿ ಪವರ್ ಟಿವಿ ಹಾವೇರಿ

RELATED ARTICLES

Related Articles

TRENDING ARTICLES