Monday, December 23, 2024

ಸಿಟಿ ರವಿ: ಗುಜರಾತ್ ಸೇತುವೆ ದುರಂತಕ್ಕೆ ಸಂತಾಪ

ಚಿಕ್ಕಮಗಳೂರು:ಗುಜರಾತ್​ನಲ್ಲಿ ನಡೆದ ದುರಂತಕ್ಕೆ ಸಿ.ಟಿ ರವಿ ಸಂತಾಪ ವ್ಯಕ್ತಪಡಿಸಿದ್ದಾರೆ. ಗುಜರಾತ್ ಮೊರ್ಬಿ ಸೇತುವೆ ದುರಂತದಲ್ಲಿ ನೂರಕ್ಕೂ ಹೆಚ್ಚುಮಂದಿ ಸಾವನಪ್ಪದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು ಸೇತುವೆ ದುರಂತಕ್ಕೆ ತಾಂತ್ರಿಕಕಾರಣ ಮಾತ್ರವಲ್ಲ, ಜವಬ್ದಾರಿ ಹೊತ್ತಿರುವವರು ಕೂಡ ಇದಕ್ಕೆ ಹೊಣೆಗಾರರು. ಸೇತುವೆ ಸಾಮರ್ಥ್ಯ 100 ಜನರು ಇರಬೇಕಾದ್ರೆ, ಐನ್ನೂರು ಜನರು ಸೇತುವೆ ಮೇಲ್ಬಾಗದಲ್ಲಿ ಬಿಟ್ಟಿರುವುದೇ ಅಪರಾಧ. ಇದು ಜವಬ್ದಾರಿಹೊತ್ತವರ ದಿವ್ಯ ನಿರ್ಲಕ್ಷ್ಯ, ಸಮಗ್ರ ತನಿಖೆಯಾಗಬೇಕು, ತಪ್ಪಸ್ಥಿತರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ರವರು ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES