ಬೆಂಗಳೂರು: ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡುತ್ತಿರುವ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಷ್ಟಾಚಾರ(ಪ್ರೋಟೋಕಾಲ್) ಉಲ್ಲಂಘನೆಯಾಗಿದೆ.
1992ರಲ್ಲಿ ಡಾ. ರಾಜಕುಮಾರ್ಗೆ ಆಗಿನ ರಾಜ್ಯಪಾಲರಾದ ಖುರ್ಷಿದ್ ಅಲಂ ಖಾನ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಆದರೆ ಈಗ ರಾಜ್ಯಪಾಲರಿಗೆ ಆಹ್ವಾನ ಪತ್ರಿಕೆಯಲ್ಲಿ ಸ್ಥಾನ ಇಲ್ಲದಿರಿರುವುದು ಹಲವು ಅನುಮಾನ ಹುಟ್ಟಿಕೊಂಡಿವೆ.
ಇಂದು ದಿ. ಪುನೀತ್ ರಾಜ್ ಕುಮಾರ್ ಅವರಿಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಣಗೊಂಡಿದ್ದು, ಅತ್ಯುನ್ನತ ಪ್ರಶಸ್ತಿ ಸಮಾರಂಭಕ್ಕೆ ರಾಜ್ಯದ ಅತ್ಯುನ್ನತ ಸಂವಿಧಾನಿಕ ಹುದ್ದೆಯಲ್ಲಿ ಇರೋ ರಾಜ್ಯಪಾಲರಿಗಿಲ್ಲ ಅಹ್ವಾನ ನೀಡದೆ ಇರೋದು ಗಮನಾರ್ಹ ಸಂಗತಿಯಾಗಿದೆ.