Sunday, December 22, 2024

ಲಕ್ಕಿಮ್ಯಾನ್ ಬಳಿಕ ಮತ್ತೆ ಡಬಲ್ ರೊಮ್ಯಾನ್ಸ್​​ನಲ್ಲಿ ಡಾರ್ಲಿಂಗ್

ಡಾರ್ಲಿಂಗ್ ಕೃಷ್ಣ ತಮ್ಮ ಹೆಸರಿಗೆ ತಕ್ಕನಾಗಿ ಪ್ರತೀ ಸಿನಿಮಾದಲ್ಲೂ ಇಬ್ಬರಿಬ್ಬರ ಜೊತೆ ರೊಮ್ಯಾನ್ಸ್ ಮಾಡ್ತಿದ್ದಾರೆ. ರೀಸೆಂಟ್ ರಿಲೀಸ್ ಲಕ್ಕಿಮ್ಯಾನ್​​ನಲ್ಲೂ ಡಬಲ್ ಬ್ಯೂಟೀಸ್ ಇದ್ರು. ಸದ್ಯ ರಿಲೀಸ್​ಗೆ ಸಜ್ಜಾಗಿರೋ ದಿಲ್​ಪಸಂದ್​ನಲ್ಲಿ ಮತ್ತೆ ಡಬ್ಕಿ ಡಬಲ್. ಅದ್ಹೇಗೆ ಏನು ಎತ್ತ ಅನ್ನೋ ಗ್ಲಾಮರ್ ಸ್ಟೋರಿ ನಿಮಗಾಗಿ ಕಾಯ್ತಿದೆ ನೀವೇ ಓದಿ.

  • ಯೂತ್​ಫುಲ್ ಎಂಟರ್​ಟೈನರ್​ನಲ್ಲಿ ಕೃಷ್ಣ ಜೊತೆ ಮೇಘ, ನಿಶ್ವಿಕಾ
  • ನವೆಂಬರ್ 11ಕ್ಕೆ ರಾಜ್ಯಾದ್ಯಂತ ಥಿಯೇಟರ್ಸ್​ಗೆ ದಿಲ್​ಪಸಂದ್
  • ನಿರ್ದೇಶಕರೇ ನಿರ್ಮಿಸಿರೋ ನಾನ್​ಸ್ಟಾಪ್ ಎಂಟರ್​ಟೈನರ್..!

ಲವ್ ಮಾಕ್ಟೇಲ್ ಚಿತ್ರ ಹಿಟ್ ಆಗಿದ್ದೇ ಆಗಿದ್ದು, ಡಾರ್ಲಿಂಗ್ ಕೃಷ್ಣ ಎಲ್ಲರ ದಿಲ್ ದೋಚಿಬಿಟ್ರು. ಅಷ್ಟೇ ಅಲ್ಲ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಕೂಡ ಆದ್ರು. ಮಾಡ್ತಿರೋ ಎಲ್ಲಾ ಸಿನಿಮಾಗಳು ಕೈ ಕೂಡ ಹಿಡಿಯುತ್ತಿವೆ. ಹೌದು.. ಸಕ್ಸಸ್​​ನ ಉತ್ತುಂಗದಲ್ಲಿರೋ ಡಾರ್ಲಿಂಗ್, ಲಕ್ಕಿಮ್ಯಾನ್ ನಂತ್ರ ದಿಲ್​ಪಸಂದ್ ಟ್ರೀಟ್ ಕೊಡೋಕೆ ರೆಡಿಯಾಗಿದ್ದಾರೆ.

ನಟ ಕೃಷ್ಣ ತಮ್ಮ ಹೆಸ್ರಿಗೆ ತಕ್ಕನಾಗಿ ಪ್ರತಿ ಸಿನಿಮಾದಲ್ಲೂ ಇಬ್ಬರಿಬ್ಬರು ನಟೀಮಣಿಯರ ಜೊತೆ ರೊಮ್ಯಾನ್ಸ್ ಮಾಡ್ತಾ ಬರ್ತಿದ್ದಾರೆ. ಲಕ್ಕಿಮ್ಯಾನ್​ನಲ್ಲಿ ರೋಷಿಣಿ ಪ್ರಕಾಶ್ ಹಾಗೂ ಸಂಗೀತಾ ಶೃಂಗೇರಿ ಜೊತೆ ಲವ್ ಡುಯೆಟ್ ಹಾಡಿದ್ರು. ಇದೀಗ ದಿಲ್ ಪಸಂದ್​ನಲ್ಲೂ ಒಬ್ಬರು ಗ್ಲಾಮರ್ ಡಾಲ್ಸ್ ಜೊತೆ ಕಮಾಲ್ ಮಾಡಲಿದ್ದಾರೆ.

ಒಂದ್ಕಡೆ ನಿಶ್ವಿಕಾ ನಾಯ್ಡು, ಮತ್ತೊಂದ್ಕಡೆ ಮೇಘ ಶೆಟ್ಟಿ. ಇಬ್ಬರೂ ಸಹ ಚಿತ್ರಕ್ಕೆ ಗ್ಲಾಮರ್ ಟಚ್ ನೀಡಿದ್ದು, ನಿಶ್ವಿಕಾಗೆ  ಗುರುಶಿಷ್ಯರು ಬಳಿಕ ಇದು ಬೋಲ್ಡ್ ರೋಲ್ ಅನಿಸಿದೆ. ಅಲ್ಲಿ ಹಳ್ಳಿ ಹುಡ್ಗಿಯಾಗಿ ಕಾಣಿಸಿಕೊಂಡಿದ್ದ ನಿಶ್ವಿಕಾ ಇಲ್ಲಿ ಪಕ್ಕಾ ಬೋಲ್ಡ್ ಬ್ಯೂಟಿಯಾಗಿ ಧೂಳೆಬ್ಬಿಸಲಿದ್ದಾರೆ. ಇನ್ನು ಟೀಸರ್ ಹಾಗೂ ರಾಮ ರಾಮ ಸಾಂಗ್​ನಿಂದ್ಲೇ ನೋಡುಗರ ಹಾರ್ಟ್​ಗೆ ಕಲರ್ ಕಲರ್ ಚಿಟ್ಟೆ ಬಿಟ್ಟಿರೋ ಇವ್ರು, ನವೆಂಬರ್ 2ಕ್ಕೆ ಟ್ರೈಲರ್ ಮೂಲಕ ಬರ್ತಿದ್ದಾರೆ.

ಶಿವ ತೇಜಸ್ ನಿರ್ದೇಶನ ಹಾಗೂ ಸುಮಂತ್ ಕ್ರಾಂತಿ ನಿರ್ಮಾಣದ ದಿಲ್​ಪಸಂದ್, ಟೈಟಲ್​ಗೆ ತಕ್ಕನಾಗಿ ಸ್ವೀಟ್ ಆಗಿರಲಿದೆ. ಕಾರಣ ಸ್ಯಾಂಪಲ್ಸ್ ಸಖತ್ ಟೇಸ್ಟಿಯಾಗಿದ್ದು, ಸಿನಿಮಾದಲ್ಲೂ ಅದೇ ಟೇಸ್ಟ್​ನ ಮೈಂಟೇನ್ ಮಾಡಿರೋ ವಿಶ್ವಾಸದಲ್ಲಿದೆ ಚಿತ್ರತಂಡ. ಅಂದಹಾಗೆ ನಿರ್ಮಾಪಕ ಸುಮಂತ್ ಕ್ರಾಂತಿ ಕೂಡ ಮೂಲತಹ ನಿರ್ದೇಶಕರಾಗಿದ್ದು, ಮತ್ತೊಬ್ಬ ನಿರ್ದೇಶಕರಿಗಾಗಿ ಬಂಡವಾಳ ಹೂಡಿರೋದು ವಿಶೇಷ.

ದಿಲ್​ಪಸಂದ್ ಇದೇ ನವೆಂಬರ್ 11ಕ್ಕೆ ತೆರೆಗಪ್ಪಳಿಸಲಿದ್ದು, ರಾಜ್ಯೋತ್ಸವ ಮಾಸವನ್ನು ಮತ್ತಷ್ಟು ಜೀವಂತವಾಗಿಡಲಿದೆ. ರಾಜ್ಯಾದ್ಯಂತ ಬಹುತೇಕ ಎಲ್ಲಾ ಸಿಂಗಲ್ ಸ್ಕ್ರೀನ್ ಥಿಯೇಟರ್​ಗಳಲ್ಲಿ ಕನ್ನಡ ಸಿನಿಮಾಗಳಿಗೆ ಆಧ್ಯತೆ ನೀಡಲಿದ್ದು, ಇದು ದಿಲ್​ಪಸಂದ್ ಬಾಕ್ಸ್ ಆಫೀಸ್​ಗೆ ಪ್ಲಸ್ ಆಗಲಿದೆ. ಒಟ್ಟಾರೆ ಕೃಷ್ಣನ ಮತ್ತೊಂದು ಲೀಲೆ ನವೆಂಬರ್ 11ಕ್ಕೆ ತೆರೆ ಮೇಲೆ ಬಯಲಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES