Saturday, January 11, 2025

ಸಾವಿನಲ್ಲೂ ಒಂದಾದ ವೃದ್ಧ ದಂಪತಿ; 70 ವರ್ಷದ ದಾಂಪತ್ಯದಲ್ಲಿ ಕಲಹವೇ ಇರಲಿಲ್ಲವಂತೆ

ಬೆಂಗಳೂರು: ಸಾವಿನಲ್ಲೂ ವೃದ್ಧ ದಂಪತಿಗಳು ಒಂದಾದ ಘಟನೆ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ.

ಇಂದು ಬೆಳಿಗ್ಗೆ (ನ.1) ಪತಿ ಶಿವಪುತ್ರಪ್ಪ ನೆಲಗುಡ್ಡ (91) ತೀವ್ರ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಪತ್ನಿ ಬಸಮ್ಮ ಶಿವಪುತ್ರಪ್ಪನ ಸಾವಿನ ಸುದ್ದಿ ತಿಳಿದು ಕುಸಿದು ಬಿದ್ದಿದ್ದು ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಈ ಜೋಡಿ 70 ವರ್ಷಗಳ ಕಾಲ ಒಟ್ಟಿಗೆ ಜೀವನ ಕಳೆದಿದ್ದು, ಇಲ್ಲಿವರೆಗೂ ಜಗಳವಾಡದೆ ದಾಂಪತ್ಯ ಜೀವನ ನಡೆಸಿದ್ದರು. ಈ ದಂಪತಿ ಸಾವಿನ ಸುದ್ದಿಯನ್ನು ನೋಡಿದ ಊರಿನ ಗ್ರಾಮಸ್ಥರು ಹಾಗು ಮನೆಯ ಕುಟುಂಬದವರು ಸೇರಿ ಮತ್ತೆ ಮದುವೆಯನ್ನು ಮಾಡಿ ಅಂತ್ಯಕ್ರಿಯೆ ನೆರವೇರಿಸಿದರು.

ಎರಡು ಜನ ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು, ಐದು ಜನ ಮೊಮ್ಮಕ್ಕಳನ್ನು ಈ ದಂಪತಿ ಅಗಲಿದ್ದಾರೆ. ದಂಪತಿಯ ಸಾವಿನ ಸುದ್ದಿ ತಿಳಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಅಂತ್ಯಕ್ರಿಯೆಗೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES