Sunday, December 22, 2024

ಮದನಾರಿ ಮಸಲತ್ತಿಗೆ ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ

ರಾಮನಗರ : ಬಂಡೆಮಠದ ಬಸವಲಿಂಗ ‌ಸ್ವಾಮೀಜಿ‌ ಆತ್ಮಹತ್ಯೆ ‌ಪ್ರಕರಣದಲ್ಲಿ ನೀಲಾಂಬಿಕೆ ಬಳಿ ಹಲವು ಸ್ವಾಮೀಜಿಗಳ ವಿಡಿಯೋ ಇರುವ ಶಂಕೆ ವ್ಯಕ್ತವಾಗುತ್ತಿದೆ.

ಮದನಾರಿ ಮಸಲತ್ತಿಗೆ ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಡಿಯೋ ಮಾಡಿಕೊಂಡು ಕಣ್ಣೂರು ಶ್ರೀಗಳಿಗೆ ಕೊಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಹಲವು ಸ್ವಾಮೀಜಿಗಳ ಜೊತೆ ಅನ್ಯೋನ್ಯವಾಗಿದ್ದ ನೀಲಾಂಬಿಕೆ, ಚಿಕ್ಕವಯಸ್ಸಿನಲ್ಲೇ ಸಿದ್ದಗಂಗಾ ಮಠದ ಜೊತೆ ಒಡನಾಟ ಹೊಂದಿದ್ದಳು, ಸಿದ್ದಗಂಗಾ ಮಠಕ್ಕೆ ಬರುತ್ತಿದ್ದ ಹಲವು ಸ್ವಾಮೀಜಿಗಳನ್ನ ಪರಿಚಯ ಮಾಡಿಕೊಂಡಿದ್ಲು.

ಇನ್ನು, ನೀಲಾಂಬಿಕೆ ಮಾವ ಸಿದ್ದಗಂಗಾ ಮಠದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಠಕ್ಕೆ ಎಂಟ್ರಿಯಾಗಿದ್ದು, ಸಿದ್ದಗಂಗಾ ಮಠದ ಪಕ್ಕದಲ್ಲೇ ನೀಲಾಂಬಿಕೆ ಅಜ್ಜಿ ಮನೆ ಕೂಡ ಇತ್ತು. ದೊಡ್ಡಬಳ್ಳಾಪುರದಲ್ಲಿ 2ನೇ ವರ್ಷದ ಇಂಜಿನಿಯರಿಂಗ್‌ ವ್ಯಾಸಂಗ ಮಾಡ್ತಿದ್ದಳು.

RELATED ARTICLES

Related Articles

TRENDING ARTICLES