ಬೆಂಗಳೂರು : ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ ನಾಳೆ ನಾಲ್ಕು ಗಂಟೆಗೆ ಆರಂಭವಾಗಲಿದೆ ಎಂದು ಸಚಿವ ಆರ್ ಅಶೋಕ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ ನಾಳೆ ನಾಲ್ಕು ಗಂಟೆಗೆ ಆರಂಭವಾಗಲಿದೆ. ಪತ್ನಿ ಅಶ್ವಿನಿ ಅವರಿಗೆ ಪ್ರಶಸ್ತಿ ನೀಡಲಿದ್ದೇವೆ. ನಟ ರಜನೀಕಾಂತ್, ಜೂನಿಯರ್ NTR ಆಗಮಿಸಲಿದ್ದಾರೆ. ರಾಜ್ ಕುಮಾರ್ ಕುಟುಂಬದ ಜೊತೆ ಅವಿನಾಭಾವ ಸಂಬಂಧ ಇದೆ. ವಿಜಯ್ ಪ್ರಕಾಶ್ ಹಾಡಿನ ಕಾರ್ಯಕ್ರಮ ಇದೆ. ಎಲ್ಲರಿಗೂ ಮುಕ್ತ ಆಹ್ವಾನ ಇದೆ ಎಂದರು.
ಇನ್ನು, ಪುನೀತ್ ತೀರಿಹೋಗಿ ಒಂದು ವರ್ಷವಾದ್ರೂ, ಅವರ ಮೇಲಿನ ಅಭಿಮಾನ ಹೆಚ್ಚಿದೆ. ಅವರ ಸಮಾಧಿಗೆ ಸಾವಿರಾರು ಜನ ಬಂದು ಹೋಗ್ತಿದ್ದಾರೆ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡ್ತಿರೋದು ಹೆಮ್ಮೆ ಇದೆ. ಈ ಪ್ರಶಸ್ತಿ ಗೌರವ ರೂಪದಲ್ಲಿ ನೀಡಲಾಗುತ್ತದೆ. ವಿಧಾನಸೌಧದ ಮುಂಭಾಗದ ರಸ್ತೆ ಬ್ಲಾಕ್ ಮಾಡಲಾಗ್ತಿದೆ. 25 ಸಾವಿರ ಜನ ಮುಂಭಾಗದಲ್ಲಿ ಸೇರಬಹುದು. ಪಾಸ್ ಎಲ್ಲಾ ಬೆಂಗಳೂರಿನ ಸಾರ್ವಜನಿಕರಿಗೆ ಕೊಡಲಾಗುತ್ತದೆ. ಚಲನಚಿತ್ರ ನಟರು, ಪ್ರಮುಖ ರಂಗದವರಿಗೆ ಪಾಸ್ ನೀಡಲಾಗುತ್ತದೆ ಎಂದರು.