Monday, December 23, 2024

ಕಾಡಿನಿಂದ ನಾಡಿಗೆ ಬಂದ ಹುಲಿರಾಯ

ಚಾಮರಾಜನಗರ : ಗ್ರಾಮಗಳ ಅಂಚಿನಲ್ಲಿ ಹುಲಿರಾಯನ ಓಡಾಟದಿಂದಾಗಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ನಗರದ ಹನೂರು ತಾಲ್ಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಸಮೀಪ ಬೀಡುಬಿಟ್ಟಿರುವ ಹುಲಿರಾಯ. ಒಂದು ವಾರದಿಂದಲೂ ಗ್ರಾಮದಂಚಿನಲ್ಲಿ ಓಡಾಡುತ್ತಿದೆ. ಗ್ರಾಮದ ಹೊರವಲಯದಲ್ಲಿ ಓಡಾಡುತ್ತಿರುವ ಹುಲಿರಾಯನ ವಿಡಿಯೋ ಸೆರೆ ಹಿಡಿದ ಗ್ರಾಮಸ್ಥರು, ಗ್ರಾಮದ ಜನರಲ್ಲಿ ಆತಂಕ ಉಂಟಾಗಿದ್ದು, ಜಮೀನು ಕಾವಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಇನ್ನು, ಸಾಮಾನ್ಯವಾಗಿ ಹುಲಿಗಳು ಇಚೆ ಬರಲು ವಯಸ್ಸಿನ ಸಮಸ್ಯೆ, ಗಡಿಗಳ ಕಾದಾಟ. ಕೂಡಲೇ ಅರಣ್ಯಾಧಿಕಾರಿಗಳ ಸ್ಥಳಕ್ಕೆ ಭೇಟಿ ಹುಲಿ ಸೆರೆ ಹಿಡಿಯಬೇಕು ಎಂಬುದು ಗ್ರಾಮಸ್ಥರು ಒತ್ತಾಯಿಸಿದ್ದು, ಅರಣ್ಯ  ಗಡಿಯಲ್ಲಿ ಆನೆ ಕಂದಕ ಹಾಗೂ ಸೋಲಾರ್ ಬೇಲಿ ಅಳವಡಿಸಲು ಪರಿವರ್ತನಾ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್ ಕೃಷ್ಣಮೂರ್ತಿ ಒತ್ತಾಯ ಮಾಡಿದ್ದಾರೆ.

RELATED ARTICLES

Related Articles

TRENDING ARTICLES