Monday, December 23, 2024

ಗುಮ್ಮಟಾಪುರದಲ್ಲಿ ಮನಸೂರೆಗೊಂಡ ಗೊರೆ ಹಬ್ಬ..!

ಚಾಮರಾಜನಗರ : ಸಗಣಿಗೆ ಪವಿತ್ರ ಸ್ಥಾನವಿದೆ.ಆದರೆ, ಅದೇ ಸಗಣಿಯನ್ನು ಕೈಯಲ್ಲಿ ಹಿಡಿಯುವುದೆಂದರೆ ಕೆಲವರಿಗೆ ಇರಿಸುಮುರಿಸು. ಆದರೆ, ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮ್ಮಟಾಪುರದಲ್ಲಿ ನಡೆದ ‘ಗೊರೆ ಹಬ್ಬ’ದಲ್ಲಿ ಸಗಣಿಯ ಗುಡ್ಡದಲ್ಲೇ ಹೊರಲಾಡಿ, ಸಗಣಿಯನ್ನು ಎರಚಾಡಿಕೊಳ್ಳುತ್ತಾ ಜನ ಸಂಭ್ರಮಿಸಿದ್ರು. ಕನ್ನಡಿಗರೇ ಹೆಚ್ಚಿರುವ ಈ ಗ್ರಾಮದಲ್ಲಿ ಹಲವಾರು ತಲೆಮಾರುಗಳಿಂದ ಪ್ರತಿವರ್ಷ ದೀಪಾವಳಿಯ ಬಲಿಪಾಢ್ಯಮಿ ಮಾರನೇ ದಿನ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಈ ವಿಶೇಷ ಹಬ್ಬ ನೋಡಲು ಸಾವಿರಾರು ಮಂದಿ ಬರುತ್ತಾರೆ. ದೀಪಾವಳಿ ಹಬ್ಬ ಬರುವುದನ್ನೇ ಕಾಯುವ ಇಲ್ಲಿನ ಯುವಕರು ಎಲ್ಲಿಲ್ಲದ ಹುಮ್ಮಸ್ಸಿನಿಂದ ಸಗಣಿ ಎರಚಾಡುವ ಮೂಲಕ ಸಂಭ್ರಮಿಸುತ್ತಾರೆ.

ಗ್ರಾಮದ ಬೀರೇಶ್ವರ ಸ್ವಾಮಿಯ ಇಷ್ಟಾರ್ಥವಾಗಿ ಈ ಗೊರೆಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಶಿವನೇ ಈ ಗೊರೆಹಬ್ಬದ ಆದೇಶ ಕೊಟ್ಟಿದ್ದಾನಂತೆ.

ಈ ಹಬ್ಬದಲ್ಲಿ ಜಾತಿಬೇಧವಿಲ್ಲದೇ ಸಹೋದರತೆ ಮರೆಯುತ್ತಾ ಈ ವಿಶೇಷ ಸಂಪ್ರದಾಯವನ್ನು ಮುಂದುವರೆಸಲಾಗುತ್ತಿದೆ. ಹೀಗೆ ಗೊರೆಹಬ್ಬ ಆಚರಿಸಿ ಬೀರೇಶ್ವರನನ್ನು ಬೇಡಿಕೊಂಡರೆ ಒಳಿತಾಗಲಿದೆ ಎಂಬುದು ಗ್ರಾಮಸ್ಥರ ನಂಬಿಕೆ.

ಶ್ರೀನಿವಾಸ್ ನಾಯಕ ಪವರ್ ಟಿವಿ ಚಾಮರಾಜನಗರ

RELATED ARTICLES

Related Articles

TRENDING ARTICLES