ಬೆಂಗಳೂರು : ನಾಳೆಯಿಂದ ಪಂಚರತ್ನ ರಥಯಾತ್ರೆ ಮೂಲಕ HDK ರಾಜ್ಯ ಪ್ರವಾಸ ಮಾಡಲಿದ್ದು, ನವೆಂಬರ್ 1ರಂದು ಮೊದಲ ಹಂತದ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಇನ್ನು, ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ, ಆರೋಗ್ಯ, ಪಂಚರತ್ನ ಯೋಜನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ನವೆಂಬರ್ 1ರಂದು ಮೊದಲ ಹಂತದ ಕಾರ್ಯಕ್ರಮ ಆರಂಭಗೊಳ್ಳಲಿದೆ. ರಾಜ್ಯದೆಲ್ಲಡೆ ಪ್ರವಾಸ ಮಾಡಿ ಜಾಗೃತಿ ಮೂಡಿಸಲಿರುವ ಹೆಚ್‌ಡಿಕೆ, ಸಾಂಪ್ರದಾಯಿಕ ಉಡುಗೆ ಮೂಲಕವೇ ರಾಜ್ಯ ಪ್ರವಾಸ ಮಾಡಲು ನಿರ್ಧಾರ ಮಾಡಿದ್ದಾರೆ.
ಬಿಳಿ ಪಂಚೆ, ಬಿಳಿ ಶರ್ಟ್ ಧರಿಸಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಿರ್ಧಾರ ಮಾಡಿದ್ದು, ಪೂಜೆ, ಮಹತ್ವದ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಡುತ್ತಿದ್ದು, ಇದೀಗ ಬಿಳಿ ಪಂಚೆ, ಬಿಳಿ ಶರ್ಟ್ ಉಡುಗೆಯನ್ನೇ ತೊಟ್ಟು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಪಂಚೆ ಶರ್ಟ್ ಧರಿಸಿ ಗಮನ ಸೆಳೆಯೋ ಮೂಲಕ ತಿರುಗೇಟು ಕೊಡಲು ಮಾಜಿ ಸಿಎಂ ಪ್ಲ್ಯಾನ್ ಮಾಡಿದ್ದು, ಜುಬ್ಬ ಧರಿಸಿ ಗ್ರಾಮೀಣ ಭಾಗದಲ್ಲಿ ಬಿಲ್ಡಪ್ ಕೊಡೋ ರಾಜಕೀಯ ವೈರಿಗಳಿಗೆ ತಿರುಗೇಟು ನೀಡಲಿದ್ದಾರೆ.
ಎಲ್ಲೆಲ್ಲಿ ಪಂಚರತ್ನ ಯಾತ್ರೆ
ನ. 1 ರಿಂದ 5 ರವರೆಗೆ ಕೋಲಾರ ಜಿಲ್ಲೆಯಲ್ಲಿ ಪ್ರವಾಸ
ನ. 6 ರಿಂದ 10 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆ
ನ. 11 ರಿಂದ 13 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ
ನ. 14 ರಿಂದ 23 ರವರೆಗೆ ತುಮಕೂರು ಜಿಲ್ಲೆ
ನ. 24 ರಿಂದ 30 ರವರೆಗೆ ಹಾಸನ ಜಿಲ್ಲೆ
ಡಿ. 2 ರಿಂದ 5 ರವರೆಗೆ ರಾಮನಗರ ಜಿಲ್ಲೆಯಲ್ಲಿ ಸಂಚಾರ ಮಾಡಲಿದ್ದಾರೆ.