Thursday, January 23, 2025

ಸೈನಿಕರ ರೀತಿ ಯುವಕರನ್ನು ಸಜ್ಜುಗೊಳಿಸುತ್ತಿದ್ದ ಪಿಎಫ್‌ಐ..!.

ಬೆಂಗಳೂರು : ಸದ್ಯ 15 ಪಿಎಫ್‌ಐ ಮುಖಂಡರ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ದಿನಕ್ಕೊಂದು ಸ್ಫೋಟಕ ವಿಚಾರಗಳು ಬಯಲಿಗೆ ಬರ್ತಿವೆ. ಭವಿಷ್ಯದಲ್ಲಿ ದೊಡ್ಡ ಪ್ಲ್ಯಾನ್ ಮಾಡಿದ್ದ ಪಿಎಫ್‌ಐ ಮುಖಂಡರು ಆಯ್ದ ಯುವಕರನ್ನು ಸೈನಿಕರ ರೀತಿ ಸಜ್ಜುಗೊಳಿಸುತ್ತಿರುವ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ. ಹೆಲ್ತ್ ಇಂಡಿಯಾ, ಫಿಟ್ ಇಂಡಿಯಾ ಎಂಬ ಧ್ಯೇಯದೊಂದಿಗೆ ಯುವಕರ ನೇಮಕ ಮಾಡಿಕೊಂಡು ವಿದ್ವಂಸಕ ಕೃತ್ಯಕ್ಕೆ ಟ್ರೈನಿಂಗ್ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅದಕ್ಕಾಗಿಯೇ ದಷ್ಟ ಪುಷ್ಟ 45 ಸಾವಿರ ಯುವಕರನ್ನು ಸೈನಿಕರ ರೀತಿ ತಯಾರಿ ಮಾಡಲು ಹುಡುಕುತ್ತಿದ್ದರು. ಈ ಎಲ್ಲಾ ಸ್ಫೋಟಕ ಮಾಹಿತಿ A10, A17 ಆರೋಪಿಗಳ ವಿಚಾರಣೆ ವೇಳೆ ಬಯಲಾಗಿದೆ. ಇನ್ನು ಮಂಗಳೂರು ವಿಟ್ಲ ಮೀಟಿಂಗ್ ಸೆಂಟರ್‌ಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ.

ಪಿಎಫ್‌ಐನ ನವಾಜ್ ಕಾವರ್, ಅಬ್ದುಲ್ ಅಜೀಜ್, ಅಬ್ದುಲ್‌ ಮೊಬೈಲ್‌ನಲ್ಲಿ ನೇಮಕಾತಿ ಬಗ್ಗೆ ಮಾಹಿತಿ ಸಿಕ್ಕಿದೆ. ಈ ವೇಳೆ ಹೆಲ್ತ್ ಇಂಡಿಯಾ -ಫಿಟ್ ಇಂಡಿಯಾ ಬಗ್ಗೆ ಚರ್ಚೆಯನ್ನು ವಾಟ್ಸಾಪ್ ಹಾಗೂ ಟಿಲಿಗ್ರಾಂನಲ್ಲಿ ದುಷ್ಕೃತ್ಯದ ಬಗ್ಗೆ ಆರೋಪಿಗಳು ಚರ್ಚೆ ಮಾಡಿದ್ದರು ಎಂಬುದು ಬಯಲಾಗಿದೆ. ಸದೃಢ ಯುವಕರನ್ನು ಬಳಸಿಕೊಂಡು ಕೋಮುಗಲಭೆ ಸೃಷ್ಟಿಸಲು ಪ್ಲ್ಯಾನ್ ಮಾಡಿದ್ದು, 2047ಕ್ಕೆ ಭಾರತ ರಾಷ್ಟ್ರವನ್ನು ಮುಸ್ಲಿಂ ರಾಷ್ಟ್ರ ಮಾಡಲು ಬೇಕಾದ ಎಲ್ಲಾ ರೀತಿಯ ತಯಾರಿ ನಡೆದಿದ್ದು, ತೀವ್ರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಸದ್ಯ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿರುವ ಖಾಕಿ ಪಡೆ ಮತ್ತಷ್ಟು ವಿಚಾರಗಳನ್ನು ಬಾಯಿ ಬಿಡಿಸುತ್ತಿದ್ದಾರೆ. ಮುಂದಿನ ದನಗಳಲ್ಲಿ ಇನ್ನೂ ಅದ್ಯಾವ ಸ್ಫೋಟಕ ವಿಷಯಗಳ ಹೊರಬರುತ್ತೋ ಕಾದುನೋಡಬೇಕಿದೆ.

ಅಶ್ವಥ್ ಎಸ್.ಎನ್.ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES