ಬೆಂಗಳೂರು : ಕೆ.ಆರ್ ಪುರಂ ಇನ್ಸ್‌ಪೆಕ್ಟರ್ ನಂದೀಶ್ ಸಾವು ಪ್ರಕರಣ ರಾಜಕೀಯ ಅಸ್ತ್ರವಾಗಿಬಿಟ್ಟಿದೆ. ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ನಾಯಕರು ಈ ವಿಚಾರವನ್ನೇ ಹೈಲೇಟ್ ಮಾಡ್ತಾ ಇದ್ದಾರೆ. ವರ್ಗಾವಣೆಗೆ 70-80 ಲಕ್ಷ ಕೊಟ್ಟು ಬಂದು, ಬಾಯಿ ಬಡ್ಕೋಬೇಕಾ ಅನ್ನೋ ಎಂಟಿಬಿ ಹೇಳಿಕೆ ದೆಹಲಿ ಮಟ್ಟದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿಬಿಟ್ಟಿದೆ. ಇದೇ ವಿಚಾರವಾಗಿ ಕೆಪಿಸಿಸಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ, ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. 40%.ಕಮೀಶನ್ ಗೆ ಇದಕ್ಕಿಂತ ಸಾಕ್ಷಿ ಬೇಕಾ..? ದುಡ್ಡು ಕೊಡದೇ ಯಾವುದೇ ನೇಮಕಾತಿ ನಡೆಯೋದಿಲ್ಲ. ಸಚಿವ ಎಂಟಿಬಿ ನಾಗರಾಜ್ ಅವ್ರೇ ಹೇಳಿದ್ದಾರೆ. ಇಂಥಹ ಅನೇಕ ಸಾಕ್ಷಿಗಳು ಹೊರಗೆ ಬರ್ತಿವೆ. ಕೂಡಲೇ ಸಿಎಂ ಬೊಮ್ಮಾಯಿ, ಅಥವಾ ಗೃಹ ಸಚಿವರು, ಅಥವಾ ಎಂಟಿಬಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಅಂತಾ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ರು.
ಇನ್ನು ಸಿದ್ದರಾಮಯ್ಯ ಕೂಡ ಸರ್ಕಾವರನ್ನ ತೀವ್ರ ತರಾಟೆಗೆ ತೆಗೆದುಕೊಂಡ್ರು. ಎಂಟಿಬಿ ನಾಗರಾಜ್ ಹೇಳಿರೋದು ಸಾಕ್ಷಿ ಅಲ್ವಾ? ಇದು ಸ್ಟ್ರಾಂಗ್ ಎವಿಡೆನ್ಸ್ ಅಲ್ವಾ? ಇದಕ್ಕಿಂತ ಹೆಚ್ಚು ಇನ್ನೇನು ಸಾಕ್ಷಿ ಬೇಕು? ಅಂತಾ ಪ್ರಶ್ನೆ ಮಾಡಿದ್ರು. ಇದಕ್ಕೆ ಹೊಣೆ ಯಾರು? ನೇರವಾಗಿ ಸರಕಾರವೇ ಹೊಣೆ ಅಲ್ವೆ.? ಪಾಪ ಅವನು ಆರಗ ಜ್ಞಾನೇಂದ್ರ, ನಾನು ಆರ್ ಎಸ್ ಎಸ್ ನಿಂದ ಬಂದಿದಿನಿ ಅಕ್ರಮವೇ ನಡೆದಿಲ್ಲ ಅಂತಾನೆ.
ಪತ್ರಕರ್ತರಿಗೆ ಎರಡು ಮೂರು ಲಕ್ಷ ಕೊಡಕ್ಕೆ ಹೋಗ್ತಿರಲ್ಲಾ. ಸಿಎಂಗೆ ಮುಂದುವರಿಯುವುದಕ್ಕೆ ನೈತಿಕತೆಯೇ ಇಲ್ಲ. ಸಿಎಂ ಹಾಗೂ ಹೋಂ ಮಿನಿಸ್ಟರ್ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ವೀಕ್ ಹಾರ್ಟ್ ಇರುವವರಿಗೆ ಏನಾಗತ್ತೆ..? ಅಂತಾ ಸಿದ್ದರಾಮಯ್ಯ ಕಿಡಿ ಕಾರಿದ್ರು.
ಒಟ್ನಲ್ಲಿ ಇನ್ಸ್ ಪೆಕ್ಟರ್ ನಂದೀಶ್ ಸಾವು ಹಾಗೂ ಪತ್ರಕರ್ತರಿಗೆ ಹಣ ನೀಡಿದ್ದಾರೆ ಎನ್ನೋ ವಿಚಾರ ರಾಜ್ಯ ರಾಜಕಾರದಲ್ಲಿ ಹಾಟ್ ಟಾಪಿಕ್ ಆಗಿದೆ. 40% ಕಮಿಷನ್, ಬೆಲೆ ಏರಿಕೆ, ಪಿಎಸ್ ಐ ಹಗರಣದ ಜೊತೆ ಈ ಪ್ರಕರಣಗಳೂ ಕಾಂಗ್ರೆಸ್ ಗೆ ಪ್ರಬಲ ಅಸ್ತ್ರವಾಗಿದೆ.
ಆನಂದ್ ನಂದಗುಡಿ ಸ್ಪೆಶಲ್ ಕರೆಸ್ಪಾಂಡೆಂಟ್ ಪವರ್ ಟಿವಿ