Friday, January 10, 2025

ಬಾಲಿವುಡ್​ ನಟ ಅಮೀರ್​​​ ಖಾನ್​​ ತಾಯಿಗೆ ಹೃದಯಾಘಾತ

ಮುಂಬೈ: ಬಾಲಿವುಡ್​ ನಟ ಅಮೀರ್ ಖಾನ್ ಅವರ ತಾಯಿ ಜೀನತ್ ಹುಸೇನ್ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಮೂಲಗಳ ಪ್ರಕಾರ, ಅಮೀರ್ ತಮ್ಮ ಪಂಚಗನಿ ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸುವ ಸಂದರ್ಭದಲ್ಲಿ ತಾಯಿಯೊಂದಿಗೆ ಇದ್ದರು,. ಈ ವೇಳೆ ಅವರ ತಾಯಿಗೆ ಹೃದಯಾಘಾತವಾಗಿದೆ.

ನಟ ತನ್ನ ತಾಯಿಯನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಮಿರ್​​ಖಾನ್​​​ ತಾಯಿಯ ಆರೈಕೆಯನ್ನು ಮಾಡುತ್ತಿದ್ದಾರೆ. ಅಮೀರ್ ಅವರ ತಾಯಿ ಈಗ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆಕೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಜೀವಕ್ಕೆ ಯಾವುದೇ ತೊಂದರೆ ಇಲ್ಲವೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಈ ವರ್ಷ ಜೂನ್ 13 ರಂದು, ಅಮೀರ್ ತನ್ನ ವಿಸ್ತೃತ ಕುಟುಂಬದೊಂದಿಗೆ ತನ್ನ ತಾಯಿಯ ಹುಟ್ಟುಹಬ್ಬವನ್ನು ಆಚರಿಸಿದರು. ನಟನ ಮಾಜಿ ಪತ್ನಿ, ನಿರ್ದೇಶಕ-ನಿರ್ಮಾಪಕ ಕಿರಣ್ ರಾವ್ ಮತ್ತು ಅವರ ಪುತ್ರ ಆಜಾದ್ ರಾವ್ ಖಾನ್ ಉಪಸ್ಥಿತರಿದ್ದರು.

ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು ಜೀನತ್ ಹುಸೇನ್ ಅವರ, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

RELATED ARTICLES

Related Articles

TRENDING ARTICLES