Friday, January 10, 2025

ವಿವಿಧ ಬೇಡಿಕೆ ಈಡೇರಿಕೆಗಾಗಿ ಕಬ್ಬು ಬೆಳೆಗಾರರ ಪ್ರತಿಭಟನೆ

ಕಾರವಾರ: ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಬೇಡಿಕೆಗಳ ಈಡೇರಿಕೆಗಾಗಿ ಮೂರನೇ ದಿನಕ್ಕೆ ಕಾಲಿಟ್ಟ ಸ್ವಾಮೀಜಿಗಳ ಉಪವಾಸ ಸತ್ಯಾಗ್ರಹ.

ಉಭಯ ಶ್ರೀ ಬಾಬಾನಂದ ಸ್ವಾಮೀಜಿ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು‌ಗಿದ್ದು, ರೈತರ ಹೋರಾಟಕ್ಕೆ ಬೆಂಬಲಿಸಿ ಉಪವಾಸ ಸತ್ಯಾಗ್ರಹ ಕೈಗೊಂಡ ಸ್ವಾಮೀಜಿಗಳು.ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ.

ಧಾರವಾಡದ ಶ್ರೀ ಕ್ಷೇತ್ರ ದ್ವಾರಕಾಪುರದ ಶ್ರೀ ಡಾ. ಪರಮಾತ್ಜೀ ಸ್ವಾಮೀಜಿ ಅವರಿಂದ ಅಮರಾಣಾಂತ ಉಪವಾಸ ಸತ್ಯಾಗ್ರಹ. ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಸ್ವಾಮೀಜಿಗಳು.ಉಪವಾಸ ಸತ್ಯಾಗ್ರಹ ಹಿನ್ನಲೆ ಅಸ್ವಸ್ಥತಗೊಂಡ ಉಭಯ ಶ್ರಿ. ಸೊಗಲ ಕ್ಷೇತ್ರದ ಬಾಬಾನಂದ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರು. ತೀವ್ರ ಅಸ್ವಸ್ಥತರಾಗಿರು ಸ್ವಾಮೀಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈತರ ಬೇಡಿಕೆ ಈಡೇರುವವರಿಗೂ ಸತ್ಯಾಗ್ರಹ ಕೈಬಿಡಲ್ಲ ಎಂದ ಸ್ವಾಮೀಜಿಗಳು.33 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿರುವ ರೈತರು. ರೈತರ ಹೋರಾಟಕ್ಕೆ ಕಿಂಚಿತ್ತು ಕಿಮ್ಮತ್ತು ಕೊಡದ ಸರ್ಕಾರ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ರೈತರು.

RELATED ARTICLES

Related Articles

TRENDING ARTICLES