Thursday, January 23, 2025

ದಕ್ಷಿಣ ಕೋರಿಯಾ ಭೀಕರ ಕಾಲ್ತುಳಿತದಲ್ಲಿ 153 ಜನ ಸಾವು

ಎಲ್ಲೆಲ್ಲೂ ಕಿಕ್ಕಿರಿದು ಸೇರಿರೋ ಜನರು. ನೂಕುನುಗ್ಗಲು ಅದರ ಮಧ್ಯೆ ಒಬ್ಬರನ್ನೊಬ್ಬರು ತುಳಿದುಕೊಂಡು ಓಡಿದ ಜನ. ಬೀದಿಯಲ್ಲಿ ಸಾವು-ಬದುಕಿನ ನಡುವೆ ಹೋರಾಟ. ತಮ್ಮವರನ್ನು ಉಳಿಸಲು ಹರಸಾಹಸ.

ಹೌದು ನಾವು ಅದೆಷ್ಟೋ ಹಬ್ಬ-ಹರಿದಿನಗಳು ಆಚರಣೆಗಳನ್ನು ನೋಡಿರುತ್ತೇವೆ. ಕೆಲವೊಂದು ಚಿಕ್ಕ-ಪುಟ್ಟ ಅನಿರೀಕ್ಷಿತ ಘಟನೆಗಳು ನಡೆಯುವುದು ಸಾಮಾನ್ಯ. ಆದರೆ ದಕ್ಷಿಣ ಕೋರಿಯಾದ ರಾಜಧಾನಿ ಸಿಯೋಲ್​ನಲ್ಲಿ ಹ್ಯಾಲೋಮೀನ್​ ಎಂಬ ಆಚರಣೆ ನಡೆದಿರೋದು ಹಾರಾರ್‌. ಈ ಭೀಕರ ಕಾಲ್ತುಳಿತದಲ್ಲಿ ಬರೋಬ್ಬರಿ 153ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಜನರು ಗಂಭೀರಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ದಕ್ಷಿಣ ಕೋರಿಯಾದ ರಾಜಧಾನಿ ಸಿಯೋಲ್​ನಲ್ಲಿ ಹ್ಯಾಲೋವೀನ್​ ಎಂಬ ಆಚರಣೆ ತುಂಬಾ ಫೇಮಸ್​. ಎರಡು ವರ್ಷದ ಕೊರೊನಾ ಕಂಟಕದಿಂದ ಈ ಬಾರಿ ‘ಹ್ಯಾಲೋಮೀನ್’​ ಅದ್ದೂರಿಯಾಗಿ ನಡೆದಿದೆ. ಈ ಹಬ್ಬದಲ್ಲಿ ಜನಸಾಮಾನ್ಯರಿಂದ ಇಡಿದು, ಮಕ್ಕಳು ವಯೋವೃದ್ಧರೂ ಸಹ ಭಾಗಿಯಾಗಿದ್ರು. ಸರಿ ಸುಮಾರು 1 ಲಕ್ಷ ಜನರು ಭಾಗಿಯಾಗಿದ್ರು. ಈ ವೇಳೆ ಭೀಕರ ಕಾಲ್ತುಳಿತ ಶುರುವಾಗಿದೆ. ಕಿರಿದಾದ ಓಣಿಗಳಲ್ಲಿ ಜನರೆಲ್ಲರೂ ಸೇರಿದ್ದರಿಂದ ಇಕ್ಕಟ್ಟು ಶುರುವಾಗಿದೆ. ಜನರು ಹಿಂದೆಯೂ ಹೋಗಲಾಗದೆ, ಮುಂದೆಯೂ ಹೋಗಲಾಗದೆ ಭಯಭೀತರಾಗಿದ್ದಿದ್ದು ಕಾಲ್ತುಳಿತದ ವೇಳೆ ನೂರಾರು ಜನರಿಗೆ ಹೃದಯ ಸ್ತಂಬನವಾಗಿ ಸಾವನ್ನಪ್ಪಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ನಡೆದ ಭೀಕರ ದುರಂತದ ಬಗ್ಗೆ ಜಾಗತಿಕ ನಾಯಕರು ಶೋಕ ವ್ಯಕ್ತಪಡಿಸಿದ್ದಾರೆ. ಭಾರತ, ಬ್ರಿಟನ್​, ಅಮೆರಿಕಾ ಸೇರಿದಂತೆ ಹಲವಾರು ದೇಶಗಳ ನಾಯಕರು ಸಂತಾಪವನ್ನು ಸೂಚಿಸಿದ್ದಾರೆ.

ಇನ್ನು ಗದ್ದಲ, ಕಾಲ್ತುಳಿತದ ವೇಳೆ ಹೃದಯ ಸ್ತಂಭನಕ್ಕೊಳಗಾಗಿ ನೆಲದಲ್ಲಿ ಬಿದ್ದಿದ್ದವರನ್ನು ಬದುಕಿಸಲು ಅಕ್ಕ-ುಪಕ್ಕದಲ್ಲಿದ್ದವರು ಹರಸಾಹಸ ಪಡುತ್ತಿದ್ದ ದೃಶ್ಯ ಮನಕರಗಿಸುವಂತಿತ್ತು.. ಅವರಲ್ಲಿ ಹೆಚ್ಚಿನವರು ಯುವಕರಾಗಿದ್ದಾರೆ. ತುರ್ತು ಸಹಾಯ ಕಾರ್ಯಕರ್ತರು ಮತ್ತು ಪಾದಚಾರಿಗಳು ರಸ್ತೆಯಲ್ಲಿಯೇ ಜನರಿಗೆ ಸಿಪಿಆರ್ ಮೂಲಕ ಬದುಕುಳಿಸುವ ಹತಾಶೆಯ ಪ್ರಯತ್ನ ನಡೆಸಿದ ದೃಶ್ಯಗಳು ಎಂತವರನ್ನು ಎದೆ ನಡುಗಿಸುತ್ತವೆ.

RELATED ARTICLES

Related Articles

TRENDING ARTICLES