Monday, December 23, 2024

ಸ್ಯಾಮ್ – ಅರ್ಜುನ್ ರೆಡ್ಡಿ ಮಧ್ಯೆ ಕುಚ್ ಕುಚ್ ಹೋತಾ ಹೈ..?!

ಯಾರ ಹೂ ಯಾರ ಮುಡಿಗೋ, ಯಾರ ಒಲವು ಯಾರ ಕಡೆಗೂ..? ಯೆಸ್​​​.. ಈ ಹಾಡು ಯಾಕೆ ಹೇಳ್ತಾ ಇದೀನಿ ಗೊತ್ತಾ..? ಊ ಅಂಟಾವಾ ಸುಂದ್ರಿ ಸಮಂತಾ ಮೇಲಿರೋ ಪ್ಯಾರ್​​ ಕಹಾನಿ ಸೀಕ್ರೆಟ್​​​​ ರಿವೀಲ್​ ಮಾಡಿದ್ದಾರೆ ವಿಜಯ್​ ದೇವರಕೊಂಡ. ಡಿವೋರ್ಸ್​ ನಂತ್ರ ಯಾರ ಕೈಗೂ ಸಿಗದ ಸೂಪರ್​​ ಬ್ಯೂಟಿ ಇನ್​ಸೈಡ್​​ ಸ್ಟೋರಿ ಏನು..? ನಾವ್​ ಹೇಳ್ತೀವಿ. ನೀವೇ ಓದಿ.

  • ಕಾಲೇಜು ದಿನಗಳಲ್ಲೇ ಸಮಂತಾ ​ದಿಲ್​​​ ಕಿ ದಡಕನ್​​​​ ಅಂತೆ..!

ಸ್ಯಾಮ್​ ಚೈತು ದಾಂಪತ್ಯಕ್ಕೆ ಯಾವ ಮಾರಿ ಕಣ್ಣು ಬಿತ್ತೋ ಗೊತ್ತಿಲ್ಲ. ಮುದ್ದು ಮುದ್ದು ಜೋಡಿ ಧಿಡೀರ್​ ಅಂತಾ ಬೇರೆಯಾದ್ರು. ಒಬ್ಬರ ಮುಖ ಕಂಡ್ರೆ ಒಬ್ಬರು ಮುಖ ತಿರುಗಿಸಿಕೊಂಡು ಹೋಗುವಂತಾಯ್ತು. ಮದ್ವೆ ಬ್ರೇಕ್​ ಅಪ್​ ಆದ್ಮೆಲೆ ಸಮಂತಾ ಇನ್ನೂ ಸಖತ್​ ಗ್ಲಾಮರಸ್​ ಆದ್ರು. ಪಾತ್ರಗಳ ಆಯ್ಕೆಯಲ್ಲೂ ಡಿಗ್ಲಾಮ್​ ರೋಲ್​​ಗಳನ್ನು ಸೆಲೆಕ್ಟ್​ ಮಾಡ್ತಾ ಹೋದ್ರು. ಈ ನಡುವೆ ಸುದ್ದಿ ಮಾಡಿದ್ದು, ವಿಜಯ್​ ದೇವರಕೊಂಡ,ಸಮಂತಾ ಲವ್​ ಸ್ಟೋರಿ.

ಸಿನಿಲೋಕ ಅಂದ್ಮೇಲೆ ಚಂದದ ಚೆಲುವೆಯರ ಹೆಸ್ರು, ಹ್ಯಾಂಡ್ಸಮ್​ ನಟರ ಜೊತೆ ತಳುಕು ಹಾಕಿಕೊಳ್ಳೋದು ಮಾಮೂಲಿ. ಆದ್ರೇ ಸ್ವತಃ ತಮಗೆ ತಾವೆ ಉರಿಯೋ ಬೆಂಕಿಗೆ ತುಪ್ಪ ಸುರಿದುಕೊಂಡಿದ್ದಾರೆ ನಟ ವಿಜಯ್​. ಯೆಸ್​​.. ಲೈಗರ್​​ ಜೊತೆ ರಶ್ಮಿಕಾ ಮಾಲ್ಡೀವ್ಸ್​ ಸುತ್ತಾಡಿದ್ದು ಇತ್ತೀಚಿನ ಬಿಸಿ ಬಿಸಿ ಸುದ್ದಿ. ಇದ್ರ ಜತೆಗೆ ಸದ್ದು ಮಾಡ್ತಿರೋದ ಅರ್ಜುನ್​ ರೆಡ್ಡಿ ಕಾಲೇಜ್​ ಲವ್​ ಸ್ಟೋರಿ. ಅರ್ರೆ, ಏನ್​ ಮ್ಯಾಟ್ರು ಅಂತೀರಾ..? ನಟ ವಿಜಯ್​ ದೇವರಕೊಂಡ ಅವ್ರಿಗೆ ಸಮಂತಾ ಮೇಲೆ ಪ್ರೇಮಾಂಕುರವಾಗಿತ್ತಂತೆ.

ಸಮಂತಾ ಅಭಿನಯದ ಯಶೋಧ ಚಿತ್ರ ರಿಲೀಸ್​ಗೆ ಸಜ್ಜಾಗಿದೆ. ಈ ಚಿತ್ರದ ಟ್ರೈಲರ್​​ನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ವಿಜಯ್ ದೇವರಕೊಂಡ, ಸಮಂತಾರನ್ನು ಪ್ರೀತಿಸುತ್ತಿದ್ದೆ, ಕಾಲೇಜು ಹುಡಗನಾಗಿದ್ದಾಗ ನಾನು ಅವಳನ್ನು ಮೊದಲ ಬಾರಿಗೆ ಬಿಗ್ ಸ್ಕ್ರೀನ್ ಮೇಲೆ ನೋಡಿದೆ. ಇಂದು ಆಕೆ ಏನಾಗಿದ್ದಾಳೋ ಎಲ್ಲದಕ್ಕೂ ನಾನು ಅವರನ್ನು ಮೆಚ್ಚುತ್ತೇನೆ, ಆರಾಧಿಸುತ್ತೇನೆ ಎಂದಿದ್ದಾರೆ.

ಸದ್ಯ, ಸಮಂತಾ ಮತ್ತು ವಿಜಯ್ ಈಗ ಶಿವ ನಿರ್ವಾಣ ಅವರ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಕುಶಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೇಕಿಂಗ್​ ವಿಡಿಯೋಗಳಲ್ಲಿ ಇವರಿಬ್ರ ಕೆಮಿಸ್ಟ್ರಿ ಸಖತ್​​ ಆಗಿ ವರ್ಕ್​​ ಆಗಿದೆ. ಜತೆಗೆ ಸಮಂತಾ, ವಿಜಯ್​ ಕ್ಯಾಸುಯೆಲ್​ ಫೋಟೋಗಳು ತೆರೆ ಮರೆಯ ಗಪ್​ಚುಪ್​ ಪ್ರೀತಿಯ ಬೆಂಕಿಗೆ ತುಪ್ಪ ಸುರಿಯುತ್ತಿವೆ. ಎನಿವೇ, ಬೆಂಕಿ ಇಲ್ಲದೆ ಹೊಗೆಯಾಡೋದಿಲ್ಲ ಅಂತಾರೆ. ಇವರಿಬ್ರ ಮಧ್ಯೆ ಅದೇನಿದಿಯೋ ಸದ್ಯದಲ್ಲೇ ಗೊತ್ತಾಗಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES