Monday, December 23, 2024

ಪಾಲಿಟಿಕ್ಸ್​ಗೆ ಬಾಲಿವುಡ್ ಕ್ವೀನ್ ಕಂಗನಾ ಎಂಟ್ರಿ..?!

ಕಂಗನಾ ರಾಣಾವತ್​​​. ಈ ಹೆಸ್ರು ಕೇವಲ ನಟಿಯಾಗಿ ಸದ್ದು ಮಾಡಿಲ್ಲ. ನೇರ, ದಿಟ್ಟ, ನಿಷ್ಟುರವಾದದಿಂದ್ಲು ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ತೆರೆಯ ಮೇಲೆ ಮುದ್ದು ಮುದ್ದಾಗಿ ಕಾಣೋ ಕಂಗನಾ ಆಪ್​ಸ್ಕ್ರೀನ್​​ ನಲ್ಲಿ ಕೆಲವ್ರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಈ ನಡುವೆ, ಬೋಲ್ಡ್​ ಅಂಡ್​ ಬ್ಯುಟಿಫುಲ್​ ಗರ್ಲ್​​​​ ರಾಜಕೀಯಕ್ಕೆ ಎಂಟ್ರಿ ಕೋಡೋದಾಗಿ ಗ್ರೀನ್ ಸಿಗ್ನಲ್​ ಕೊಟ್ಟಿದ್ದಾರೆ. ಯೆಸ್​​.. ಏನಿದು ಸರ್​ಪ್ರೈಸಿಂಗ್​​​ ಸುದ್ದಿ ಅಂತೀರಾ..? ನೀವೇ ಓದಿ.

  • ಅರಳುತ್ತಾ ಕಮಲ..? ಯಾರ ‘ಕೈ’ಗೆ ನಟಿ ಕಂಗನಾ..?

ಬಾಲಿವುಡ್​ ನಟಿ ಕಂಗನಾ ಕೇವಲ ಆ್ಯಕ್ಟಿಂಗ್​ ಮಾತ್ರವಲ್ಲದೇ, ಸಾಮಾಜಿಕವಾಗಿಯೂ ಕೆಲವು ಧೋರಣೆಗಳ ವಿರುದ್ದ ದನಿ ಎತ್ತಿ ಸುದ್ದಿಯಾದವ್ರು. ಕಂಗನಾ ಅಂದ್ರೆ ಹಿಟ್​​ ಸಿನಿಮಾಗಳಿಗೂ ಸೈ, ಹಿಟ್ ಪ್ರಶ್ನೆಗಳ ಮೂಲಕ ಶೂಟ್​ ಮಾಡೋಕು ಸೈ. ಈಗಾಗ್ಲೇ, ಚಿತ್ರರಂಗದಲ್ಲೂ ಜಯಲಲಿತಾ, ಇಂದಿರಾಗಾಂಧಿ ಯಂತಹ ಚಾಲೆಂಜಿಂಗ್​ ರೋಲ್​​​​​​​​​ ನಿಭಾಯಿಸಿ ಮೆಚ್ಚುಗೆ ಪಡೆದವ್ರು.

ರೀಲ್​ ಲೈಫ್​ನಲ್ಲಿ ಮಾತ್ರವಲ್ಲದೆ, ರಿಯಲ್​ ಲೈಫ್​​ನಲ್ಲೂ ರಾಜಕೀಯದ ಇಚ್ಛೇ ವ್ಯಕ್ತಪಡಿಸಿರೋ ಕಂಗನಾ, ರಾಜಕೀಯಕ್ಕೆ ಬರುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಖಾಸಗಿ ಸುದ್ಧಿ ಸಂಸ್ಥೆ ಜೊತೆ ಮಾತನಾಡಿರುವ ಕಂಗನಾ ಬಿಜೆಪಿ ಬಯಸಿದ್ರೆ 2024 ಚುನಾವಣೆಗೆ ಹಿಮಾಚಲ ಪ್ರದೇಶದಿಂದ ಕಣಕ್ಕಿಳಿಯುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಕಂಗನಾ ರಾಣಾವತ್​​ ಮೂಲತಃ ಹಿಮಾಚಲ ಪ್ರದೇಶದವ್ರು. ಹಾಗಾಗಿ ತಮ್ಮ ಮಣ್ಣಿನ ಜನರ ಸೇವೆ ಮಾಡಲು ಬಯಸಿದ್ದಾರೆ. ಮಂಡಿ ಕ್ಷೇತ್ರದಿಂದ ಸ್ಪರ್ಧೆ ಮಾಡೋ ಇಂಗಿತವಿದ್ದು, ಬಿಜೆಪಿ ಅವಕಾಶ ನೀಡಿದ್ರೆ ಅದು ನನ್ನ ಸೌಭಾಗ್ಯ ಎಂದಿದ್ದಾರೆ. ಈ  ಮುಂಚೆಯೂ ಬಿಜೆಪಿ ನಾಯಕರ ಜತೆ ಗುರುತಿಸಿಕೊಂಡಿರೋ ಕಂಗನಾ ರಾಜಕೀಯದ ಅಖಾಡಕ್ಕೆ ಧುಮುಕೋಕೆ ಉತ್ಸುಕರಾಗಿದ್ದಾರೆ.

ಕಂಗನಾ ಆಸೆಗೆ ಬಿಜೆಪಿ ಕೂಡ ನೀರೆರಿದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸ್ವಾಗತಿಸಿದ್ದಾರೆ. ಕಮಲ ಪಡೆಯತ್ತ ಒಲವು ತೋರಿಸಿರೋ ಕಂಗನಾ 2024 ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ ಪಡೆದು ಚುನಾವಣೆಗೆ ನಿಂತ್ರು ಅಚ್ಚರಿ ಇಲ್ಲ. ಸಿನಿಮಾದಲ್ಲಿ ಹೆಸ್ರು ಮಾಡಿ, ರಾಜಕೀಯದಲ್ಲೂ ಮಿಂಚಿದ ಅನೇಕ ನಟ., ನಟಿಯರಿದ್ದಾರೆ. ಈ ಸಾಲಿಗೆ ಕಂಗನಾ ಕೂಡ ಸೇರ್ತಾರಾ..? ಅಥ್ವಾ ಮಿಂಚಿ ಮರೆಯಾಗ್ತಾರಾ..? ಕಾದು ನೋಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES