Wednesday, January 22, 2025

ಮಾಜಿ ಸಿಎಂ ಸಿದ್ದು ವಿರುದ್ದ ವಾಗ್ವಾದಕ್ಕಿಳಿದ ಸಂಸದ ನಳೀನ್ ಕುಮಾರ್

ಕಲಬುರಗಿ: ಕಲಬುರಗಿಯಲ್ಲಿ ಬಿಜೆಪಿ ಒಬಿಸಿ ವಿರಾಟ್ ಸಮಾವೇಶದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿಕೆ ನೀಡಿರುವುದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಈ ವೇಳೆ ಮನೆಗೆ ಮನೆಗೆ ಭಾಗ್ಯಲಕ್ಷ್ಮೀ ಸ್ಕಿಮ್ ನೀಡಿದ್ದು ನಮ್ಮ ಸರ್ವೋಚ್ಚ ನಾಯಕ ಬಿಎಸ್ ಯಡಿಯೂರಪ್ಪ. ಕಲಬುರಗಿ ನಗರ ಇಂದು ಕೇಸರಿಮಯವಾಗಿದೆ. ಭಾರತ ಜನತಾ ಪಾರ್ಟಿ ಜೊತೆ ಹಿಂದುಳಿದ ವರ್ಗಗಳಿವೆ ಎಂದು ಇಡೀ ದೇಶಕ್ಕೆ ಸಂದೇಶ ಹೋಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಟವೆಲ್ ಹಿಡಿದುಕೊಂಡು ಓಡಾಡುತ್ತಿದ್ದಾರೆ.

ಸಿದ್ದರಾಮಯ್ಯ ರವರು ಸಿಎಂ ಆಗೋಕೆ ಕನಸು ಕಾಣುತ್ತಿದ್ದಾರೆ. ಅಹಿಂದ ವರ್ಗದ ಮೇಲೆ ಸಿದ್ದರಾಮಯ್ಯ ಸಿಎಂ ಆಗಿ, ಇದೀಗ ಅಹಿಂದವನ್ನ ತುಳಿದಿದ್ದಾರೆ. ಸಿದ್ದರಾಮಯ್ಯ ಎಸ್ಸಿ/ಎಸ್ಟಿ ವರ್ಗಕ್ಕೆ ಮೀಸಲಾತಿ ಕೊಟ್ಟಿಲ್ಲ, ನಮ್ಮ ಬೊಮ್ಮಾಯಿ ರವರು ಕೊಟ್ಟಿದ್ದಾರೆ.
ಪರಿವಾರ/ತಳವಾರ ಸಮಾಜದ ಸಮಸ್ಯೆಗಳನ್ನ ಬಗೆಹರಿಸಲು ನಾವು ಮುಂದಾಗಿದ್ದೇವೆ.

ಸಿದ್ದರಾಮಯ್ಯ ರವರು ಕುರುಬ ಸಮಾಜಕ್ಕೆ ಏನು ಮಾಡಿಲ್ಲ. ಕುರುಬ ಸಮಾಜಕ್ಕೆ ಸಿಎಂ ಬೊಮ್ಮಾಯಿ ಅನೇಕ ಕೊಡುಗೆಗಳನ್ನ ನೀಡಿದ್ದಾರೆ. ಸಿದ್ದರಾಮಣ್ಣ ಯಾಕೆ ನೀವು ಕುರುಬರು/ಹಿಂದುಳಿದ ವರ್ಗಗಳ ಕಣ್ಣಿರು ಒರೆಸಿಲ್ಲ? ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಖರ್ಗೆಗೆ ಸೀಟು ಕೊಡಲ್ಲ, ಡಿಕೆಶಿ ಸಿಎಂ ಆಗಲ್ಲ. ಕಾಂಗ್ರೆಸ್ ಮುಕ್ತ ಕರ್ನಾಟಕವಾಗುತ್ತೆ, ಕಾಂಗ್ರೆಸ್ ಮುಕ್ತ ಕಲಬುರಗಿ ಆಗುತ್ತೆ. ರಾಜ್ಯದಲ್ಲಿ 150 ಸೀಟು ಪಡೆದು ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿ ಮಾಡುತ್ತೇವೆ ಎಮದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES