Wednesday, January 22, 2025

ಧರಣಿ ಮಂಡಲದೊಳಗೆ ನವೀನ್- ಐಶಾನಿ ಶೆಟ್ಟಿ ಶೈನಿಂಗ್

ಬಾಲ್ಯದಲ್ಲಿ ಕೇಳಿದ್ದ ಪುಣ್ಯಕೋಟಿಯ ಧರಣಿ ಮಂಡಲ ಮಧ್ಯದೊಳಗೆ ಹಾಡು ಮರೆಯೋಕೆ ಸಾಧ್ಯವಿಲ್ಲ. ಇದೀಗ ಅದೇ ಈ ಸಾಲಿನ ಮೇಲೆ ಇಂಟ್ರೆಸ್ಟಿಂಗ್​​ ಸಿನಿಮಾ ತಯಾರಾಗಿದೆ. ಈ ಚಿತ್ರದ ಸ್ಯಾಂಪಲ್​ಗಳು ಎಕ್ಸ್​ಸ್ಟ್ರಾ ಕಿಕ್ಕು ಕೊಡ್ತಿವೆ. ವಾರೆವ್ಹಾ ಫೀಲ್​ ಕೊಡ್ತಿವೆ. ಹೊಸ ಫ್ಲೇವರ್​​ನಲ್ಲಿ ಎಲ್ಲರ ಕುತೂಹಲ ಕೆರಳಿಸಿರೋ ಧರಣಿ ಮಂಡದೊಳಗಿನ ಕಥೆ ಏನ್​ ಗೊತ್ತಾ..? ನೀವೇ ಓದಿ.

  • ಪೆಪ್ಪಿ ಫ್ಲೇವರ್​ನಲ್ಲಿ ವಾಟರ್​ ಮೇಲೆ ವಾಕಿಂಗ್​​ ಸಾಂಗ್​​​..!

ಟೈಟಲ್ ಮೂಲಕವೇ ಸಿನಿ ಪ್ರಿಯರಿಗೆ ಹತ್ತಿರವಾಗಿರುವ ಸಿನಿಮಾ ‘ಧರಣಿ ಮಂಡಲ ಮಧ್ಯದೊಳಗೆ’. ಈಗಾಗಲೇ ಈ ಸಿನಿಮಾ ಸ್ಯಾಂಪಲ್ ಗಳು ಎಲ್ಲರನ್ನೂ ಟೈಟಲ್ ಗಿಂತ ಹೆಚ್ಚೇ ಸೆಳೆದಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರತಂಡ ಪ್ರಚಾರ ಕಾರ್ಯವನ್ನು ಅಷ್ಟೇ ಕ್ರಿಯೇಟಿವ್ ಆಗಿ ನಡೆಸುತ್ತಿದೆ. ಚಿತ್ರದಲ್ಲಿ ಗುಲ್ಟು ಖ್ಯಾತಿಯ ನವೀನ್​ ಶಂಕರ್​​, ಐಶಾನಿ ಶೆಟ್ಟಿ ಲೀಡ್​ ರೋಲ್​ನಲ್ಲಿ ಹೊಸ ಕಥೆ ಹೇಳಲಿದ್ದಾರೆ.

ಈ ಹಿಂದೆ ವಿಜಯ್ ಪ್ರಕಾಶ್ ಹಾಡಿರುವ ‘ಮಾತು ಮಾತಲ್ಲೇ’ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿ ಸಿನಿ ಪ್ರೇಮಿಗಳ ಮನಗೆದ್ದಿತ್ತು. ಇದೀಗ ಎರಡನೇ ಹಾಡು ಕೂಡ ಕಿಕ್ಕೇರಿಸಿದೆ. ಶರಣ್​​ ಹಾಗೂ ವಾಸುಕಿ ದನಿಯಲ್ಲಿ ವಾಟರ್​​​ಮೇಲೆ ವಾಕಿಂಗ್​ ಹೊಂಟವ್ನೆ ಸಾಂಗ್​​ ರಿಲೀಸ್​ ಆಗಿದೆ. ಈ ಪೆಪ್ಪಿ ಹಾಡಿನ ರುಚಿ ಸಖತ್​ ಟೇಸ್ಟಿಯಾಗಿದೆ. ನಟ ನೀನಾಸಂ ಸತೀಶ್ ಈ ಹಾಡನ್ನು ಮೆಚ್ಚಿ ಹರ್ಷ ವ್ಯಕ್ತಪಡಿಸಿದ್ದಾರೆ.

‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ವ್ಯಕ್ತಿ, ವ್ಯಕ್ತಿತ್ವ, ಸಂಬಂಧ ಮತ್ತು ಸಂದರ್ಭಗಳ‌ ಮಧ್ಯೆ ನಡೆಯುವ ಸಂಘರ್ಷದ ಮೇಲಿನ ಕಥೆಯಂತೆ. ಕ್ರೈಂ ಥ್ರಿಲ್ಲರ್ ಡ್ರಾಮಾ ಕಥೆಯನ್ನು ಒಳಗೊಂಡ ಈ ಚಿತ್ರವನ್ನು ಪೂರಿ ಜಗನ್ನಾಥ್ ಜೊತೆ ಕೆಲಸ ಮಾಡಿ ಅನುಭವ ಇರುವ ಶ್ರೀಧರ್ ಶಿಕಾರಿಪುರ ನಿರ್ದೇಶಿಸಿದ್ದಾರೆ. ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು ಮುಂತಾದವ್ರು ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.

ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ. ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂಕಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು. ವೀರೇಂದ್ರ ಕಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ನವೆಂಬರ್ 25ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದ್ದು ಪ್ರೇಕ್ಷಕರ ರೆಸ್ಪಾನ್ಸ್​ ಹೇಗಿರುತ್ತೋ ಕಾದು ನೋಡಬೇಕಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES