ಬೆಂಗಳೂರು: ಕಳೆದೆರಡು ದಿನಗಳಿಂದೆ, ಕೆಪಿಸಿಸಿ ಕಚೇರಿ ಮುಂದೆ ಬಿಜೆಪಿ ಸರ್ಕಾರದ ಕಮಿಶನ್ ಬೋರ್ಡ್ನಿಂದಾಗಿ ಸಿಎಂ ಮುಜುಗರ ಪಡುವಂತೆ ಆಗಿತ್ತು. ಮುಂದಿನ 2023 ರ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಆರೋಪ ಪ್ರತ್ಯಾರೋಪಗಳ ಸುರಿಮಳೆ ಮಾಡುತ್ತಿದ್ದಾರೆ.
ಪತ್ರಕರ್ತರಿಗೆ ಸಿಎಂ ಕಚೇರಿಯಿಂದ ಹಣದ ಗಿಫ್ಟ್ ವಿಚಾರವಾಗಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಸಿಎಂ ಬೊಮ್ಮಾಯಿ ರವರು, ನಾನು ಯಾರಿಗೂ ಹಣ ನೀಡುವಂತೆ ಸೂಚನೆ ಕೊಟ್ಟಿಲ್ಲ. ಇದು ಕಾಂಗ್ರೆಸ್ ನ ಟೂಲ್ ಕಿಟ್ ನ ಮುಂದುವರೆದ ಭಾಗ.
ಸುಳ್ಳು ಸೃಷ್ಟಿ ಮಾಡೋದು ಕಾಂಗ್ರೆಸ್ ಚಾಳಿ ಅದನ್ನ ಮಾಡಿದೆ. ನಾನು ಯಾರಿಗೂ ಗಿಫ್ಟ್ ಕೊಡುವಂತೆ ಸೂಚನೆ ಕೊಟ್ಟಿಲ್ಲ. ಕಾಂಗ್ರೆಸ್ ಇದ್ದಾಗ ಏನೇನು ಕೊಟ್ಟಿದ್ದಾರೆ ಎಲ್ಲಿರಿಗೂ ಗೊತ್ತಿದೆ. ಲ್ಯಾಪ್ ಟಾಪ್, ಐ ಫೋನ್, ಬಂಗಾರದ ಕಾಯಿನ್ ಎಲ್ಲವೂ ಕೊಟ್ಟಿದ್ದಾರೆ. ಕಾಂಗ್ರೆಸ್ ಅವರಿಗೆ ಈ ಬಗ್ಗೆ ಮಾತಾಡೋಕೆ ಯಾವ ನೈತಿಕತೆ ಇದೆ. ಲೋಕಾಯುಕ್ತಕ್ಕೆ ಈಗ ದೂರು ಕೊಟ್ಟಿದ್ದಾರೆ. ಲೋಕಾಯುಕ್ತಕ್ಕೆ ತನಿಖೆ ಮಾಡಲಿ. ಸತ್ಯ ಹೊರಗೆ ಬರುತ್ತೆ.
ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ತುಂಬಾ ಕೆಟ್ಟದಾಗಿ ಮಾತಾಡಿದ್ದಾರೆ. ಇದನ್ನ ನಾನು ಖಂಡಿಸುತ್ತೇನೆ. ನಾನು ಸ್ಪಷ್ಟವಾಗಿ ಹೇಳ್ತೀನಿ. ನಾನು ಯಾರಿಗೂ ಗಿಫ್ಟ್ ಕೋಡೋಕೆ ಸೂಚನೆ ಕೊಟ್ಟಿಲ್ಲ.ಲೋಕಾಯುಕ್ತ ಒಂದು ಪೊಲೀಸ್ ಏಜೆನ್ಸಿ ಇದೆ. ತನಿಖೆ ಮಾಡಲಿ ಸತ್ಯ ಹೊರಗೆ ಬರುತ್ತೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ.