ಬೆಂಗಳೂರು : ಮಂಗಳವಾರ ರಾಜ್ಯೋತ್ಸವದ ಸಂಭ್ರಮವಿದೆ. ಕಳೆದ ವರ್ಷ ಅಪ್ಪು ಅಗಲಿಕೆಯಿಂದಾಗಿ ತೀರಾ ಸರಳವಾಗಿ ರಾಜ್ಯೋತ್ಸವ ಆಚರಣೆ ಆಗಿತ್ತು. ಆದ್ರೆ, ಈ ಬಾರಿ ರಾಜ್ಯೋತ್ಸವವನ್ನು ಅಪ್ಪು ಇರುವ ಬಾವುಟಗಳ ಮೂಲಕ ಆಚರಣೆ ಮಾಡಲು ನಿರ್ಧರಿಸಲಾಗಿದೆ. ರಾಜಧಾನಿಯ ಯಶವಂತಪುರ, ಮಾಗಡಿ ರಸ್ತೆ,ಬಿನ್ನಿ ಮಿಲ್ ರಸ್ತೆ, ಸಿಗ್ನಲ್‌ಗಳು ಸೇರಿದಂತೆ ಹಲವೆಡೆ ಈ ಕನ್ನಡ ಧ್ವಜಗಳ ಮಾರಾಟ ಈಗಲೇ ಶುರುವಾಗಿದೆ.
ಇನ್ನು ಈ ಬಾರಿ ಉತ್ಪಾದನೆ ಕಮ್ಮಿ ಆಗಿರೋದ್ರಿಂದ ಕನ್ನಡ ಧ್ವಜಗಳು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬಂದಿವೆ. ಹೀಗಾಗಿ ಬೆಲೆ ಕೂಡ ಕೊಂಚ ಜಾಸ್ತಿಯಾಗಿದೆ. ಆದರೂ ಕೂಡ ಜನ ರಾಜ್ಯೋತ್ಸವ ಆಚರಿಸಬೇಕು ಅಂತ ಬಾವುಟವನ್ನು ಖರೀದಿ ಮಾಡುತ್ತಿದ್ದಾರೆ. ಇದರ ಜೊತೆಗೆ ಬಂಟಿಂಗ್ಸ್ , ಬ್ಯಾಡ್ಜ್, ಟಿ ಶರ್ಟ್ ಹೀಗೆ ಹಲವು ವಸ್ತುಗಳು ಕನ್ನಡ ಧ್ವಜದಲ್ಲಿ ನಿರ್ಮಾಣಗೊಂಡಿದೆ.
ಒಟ್ಟಾರೆಯಾಗಿ ನವೆಂಬರ್‌ಗೂ ಮುನ್ನವೇ ಎಲ್ಲೆಲ್ಲೂ ಕನ್ನಡದ ಕಂಪು ಸೂಸುತ್ತಿತ್ತು. ಕನ್ನಡ ಉಳಿಸಿ ಬೆಳಸಬೇಕು ಅಂತ ಅದ್ದೂರಿಯಾಗಿ ರಾಜ್ಯೋತ್ಸವವನ್ನು ಅರ್ಥಫೂರ್ಣವಾಗಿ ಆಚರಿಸಲು ಸಿದ್ಧತೆ ಭರದಿಂದ ಸಾಗಿದೆ.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು