Saturday, November 2, 2024

ವಿದೇಶಿ ಪ್ರಜೆಗಳಿಂದ ಕೋಟ್ಯಂತರ ಮಾದಕವಸ್ತುಗಳು ವಶಕ್ಕೆ..!

ಬೆಂಗಳೂರು : ಇವ್ರು ಬೆಂಗಳೂರಿಗೆ ಬರ್ತಿದ್ದ ದುಬಾರಿ ಮಾದಕ ಪದಾರ್ಥಗಳ ರೂವಾರಿಗಳು. ಬಂದಿದ್ದೇ ಒಂದು ಉದ್ದೇಶಕ್ಕೆ. ಆದ್ರೆ, ಶುರುವಿಟ್ಕೊಂಡಿದ್ದು ಡ್ರಗ್ಸ್ ದಂಧೆಯನ್ನು. ನಮ್ಮನ್ನು ತಡೆಯೋರ್ಯಾರು ಅಂತಾ ತಮ್ಮದೇ ಜಾಲವನ್ನು ನಡೆಸುತ್ತಿದ್ದ ಈ ಹನ್ನೊಂದು ಆರೋಪಿಗಳನ್ನು ಅಶೋಕನಗರ ಹಾಗೂ ಕಬ್ಬನ್ ಪಾರ್ಕ್ ಪೊಲೀಸರ ತಂಡ ಬಂಧಿಸಿದೆ.ಮೊಹಮ್ಮದ್ ಹರೂನ್, ಮೊಹಮ್ಮದ್ ಒರುವಿಲ್, ಮೊಹಮ್ಮದ್ ಇಲಿಯಾಸ್, ಅಬ್ಧುರ್ ಅಬು, ಅಹಮದ್ ಮೊಹಮ್ಮದ್ ‌ಮೂಸಾ, ಮಾನ್ಶನ್ಶೀದ್, ಮೊಹಮ್ಮದ್ ಬಿಲಾಲ್, ಜಾನ್ ಪೌಲ್, ಜೋಸೆಫ್ ಬೆಂಜಮಿನ್ ಹಾಗೂ ಇಸ್ಮಾಯಿಲ್ ಬಂಧಿತರು.

ಮಧ್ಯ ಆಫ್ರಿಕಾದ ಸುಡಾನ್, ಯೆಮನ್, ನೈಜೀರಿಯಾ,ಚಾಡ್ ದೇಶಗಳಿಂದ ಉದ್ಯೋಗ, ಉನ್ನತ ಶಿಕ್ಷಣದ ಕಾರಣ ನೀಡಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿಗಳ ಪೈಕಿ ಕೆಲವರು ವೀಸಾ ಅವಧಿ ಮುಗಿದ ಬಳಿಕವೂ ನಕಲಿ ದಾಖಲಾತಿಗಳನ್ನು ಬಳಸಿ ಭಾರತದಲ್ಲೇ ವಾಸವಿದ್ದರು. ತಮ್ಮದೇ ಜಾಲ ರೂಪಿಸಿಕೊಂಡು ಹೈ ಎಂಡ್ ಮಾದಕ ಪದಾರ್ಥಗಳನ್ನು ವಿದೇಶದಿಂದ ಆಮದು ಮಾಡಿಕೊಂಡು ಇಲ್ಲಿನ ಮಾದಕ ವ್ಯಸನಿಗಳಿಗೆ ನಿರಂತರವಾಗಿ ಸರಬರಾಜು ಮಾಡ್ತಿದ್ರು.

ಆರೋಪಿಗಳ ಗಿರಾಕಿಯೊಬ್ಬ ನೀಡಿದ ಮಾಹಿತಿ ಆಧರಿಸಿದ ಕಬ್ಬನ್ ಪಾರ್ಕ್ ಉಪವಿಭಾಗದ ಪೊಲೀಸರ ತಂಡ ಕೇರಳ, ಮುಂಬೈ ಸೇರಿದಂತೆ ವಿವಿಧೆಡೆ ಆರೋಪಿಗಳನ್ನು ಬಂಧಿಸಿದ್ದು, ಗಾಂಜಾ, ಎಂಡಿಎಂಎ ಸೇರಿದಂತೆ ಬರೋಬ್ಬರಿ 1 ಕೋಟಿ 9 ಲಕ್ಷ ಮೌಲ್ಯದ ಮಾದಕ ಪದಾರ್ಥಗಳನ್ನು ವಶಕ್ಕೆ ಪಡೆದಿದೆ.

ಅಶ್ವಥ್ ಎಸ್.ಎನ್.ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES