ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿಡೀರ್ ಆಗಿ ಚಳಿ ಹೆಚ್ಚಳವಾಗಿದೆ. ವಾಡಿಕೆಯಂತೆ ನವೆಂಬರ್ ಅಂತ್ಯ ದಿಂದಲೇ ಚಳಿಗಾಲ ಶುರುವಾಗುತ್ತದೆ.ಇಷ್ಟು ದಿನ 27 ರಿಂದ 30 ಡಿಗ್ರಿ ಟೆಂಪರೇಚರ್ ಈಗ 21 ರಿಂದ 19 ಡಿಗ್ರಿಗೆ ಇಳಿಕೆಯಾಗಿದೆ.
ಆದ್ರೆ ಈ ಬಾರಿ ಅಕ್ಟೊಬರ್ನಲ್ಲೆ ಚಳಿ ಅಬ್ಬರ ಜೋರಾಗಿದೆ. ರಾತ್ರಿ ಹೊತ್ತಿನಲ್ಲಿ ಇಬ್ಬನಿ ಬೀಳಲು ಶುರುವಾಗಿದೆ. ಹೀಗಾಗಿ ಜನರಿಗೆ ಜ್ವರ, ಶೀತ-ಕೆಮ್ಮು ಮುಂತಾದ ಸಾಂಕ್ರಾಮಿಕ ರೋಗಬಾಧೆಯ ಭೀತಿ ಹಚ್ಚಾಗಿದೆ. ಬ್ಯಾಕ್ಟೀರಿಯಾ, ವೈರಸ್‌ಗಳ ಬೆಳವಣಿಗೆ ಹೆಚ್ಚಾಗಿ ರೋಗನಿರೋಧಕ ಶಕ್ತಿ ಕುಂದುವ ಅಪಾಯ. 10 ರಲ್ಲಿ 5 ಜನಕ್ಕೆ ಜ್ವರ , ನೆಗಡಿ , ಕೆಮ್ಮು ಶುರುವಾಗಿದೆ. ಆಸ್ಪತ್ರೆಗಳ OPD ಗಳಲ್ಲಿ ರೋಗಿಗಳು ಹೆಚ್ಚುತ್ತಿದ್ದಾರೆ.
ಸಣ್ಣ ಕ್ಲಿನಿಕ್ ಗಳಲ್ಲಿ ಕಾಲಿಡಲು ಕೂಡ ಜಾಗವಿರದಷ್ಟು ಕ್ಯೂ ನಿಂತಿದೆ.ಜನರಿಗೆ ಆರೋಗ್ಯದ ಮೇಲೆ ನಿಗಾ ಇರಲಿ ಎಂದು ವೈದ್ಯರು ಸೂಚಿಸಿದ್ದಾರೆ. ಚಳಿಗಾಲದಲ್ಲಿ ಹೆಚ್ಚಾಗಿ ಬೆಚ್ಚಗಿನ ಉಡುಪುಗಳನ್ನು ಧರಿಸಿ. ಮನೆಯಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ
ಕುದಿಸಿ ಆರಿಸಿದ ನೀರನ್ನು ಉಪಯೋಗಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸಿ ಎಂದು ವೈದ್ಯರು ತಿಳಿಸಿದ್ದಾರೆ.