Wednesday, January 22, 2025

ಫ್ಲೈ ಓವರ್​ನಿಂದ ಕೆಳಗೆ ಬಿದ್ದು ಇಬ್ಬರು ಯುವಕರ ಮೃತ್ಯು

ಬೆಂಗಳೂರು: ಬೆಂಗಳೂರಿನ ಕೆಐಎಬಿ ಏರ್ಪೋರ್ಟ್ ಎಲಿವೇಟೆಡ್ ರಸ್ತೆ ಪ್ಲೈ ಓವರ್ ಮೇಲೆ ಅಪಘಾತ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಇಂದು ಯಲಹಂಕ ಸಂತೆ ಗೇಟ್ ಫ್ಲೈ ಓವರ್ ಮೇಲೆ ಡಿವೈಡರ್​ಗೆ ಸ್ವತಃ ಬೈಕ್​ ಡಿಕ್ಕಿ ಹೊಡೆದು ರಸ್ತೆ ಮೇಲಿಂದ ಇಬ್ಬರು ಯುವಕರು  ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನಲ್ಲಿ ನೆಲೆಸಿದ್ದರು ಎಂದು ಹೇಳಲಾಗಿದೆ.

ಮೃತರು ವಿಕ್ರಮ್(26) ಮತ್ತು ಅಮಿತ್ ಸಿಂಗ್(27) ಎಂದು ಗುರುತಿಸಲಾಗಿದ್ದು, ಮತ್ತೋರ್ವ ಸವಾರ ಸೌರಬ್ (27) ಯುವಕನಿಗೆ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಕ್ಕೆ ಒಳಗಾದ ಸೌರಬ್​ನನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಮೃತಪಟ್ಟ ಇಬ್ಬರು ಯುವಕರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES