Monday, December 23, 2024

ಸಿದ್ದು ವಿರುದ್ದ ಕೆಸಿಎನ್ ವಾಗ್ದಾಳಿ

ಮಂಡ್ಯ:ಮೀಸಲಾತಿಗೆ ಒಕ್ಕಲಿಗರ ಹೋರಟದ ವಿಚಾರವಾಗಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಕೆಸಿಎನ್ ವಾಗ್ದಾಳಿ ನಡೆಸಿದ್ದಾರೆ.’ಸಿದ್ದರಾಮಯ್ಯ ರವರು ಮಂಡ್ಯಕ್ಕೆ ಬಂದು, ಮೂಗಿನ ನೇರಕ್ಕೆ ಮಾತನಾಡ್ತಾರೆ’.

ಮಂಡ್ಯದಲ್ಲಿ ಸಚಿವ ಕೆ.ಸಿ.ನಾರಾಯಣ್ ಗೌಡ ಹೇಳಿಕೆ. ಮೀಸಲಾತಿಯಲ್ಲಿ ಖಂಡಿತ ನಮ್ಮ ಹೋರಾಟ ಇದೆ, ನಿರ್ಮಾಲನಂದನಾಥ ಸ್ವಾಮೀಜಿ ಧ್ವನಿ ಎತ್ತಿದ್ದಾರೆ. ನಾವೇಲ್ಲ ಪರ ಇದ್ದೇವೆ, ಸಂಪೂರ್ಣ ನಮ್ಮ ಬೆಂಬಲ ಇದೆ. ಈಗಾಗಲೇ ಎಲ್ಲಾ ಸ್ವಾಮೀಜಿಗಳು ಮನವಿ ಮಾಡಿದ್ದಾರೆ. ನಮ್ಮ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಒಳ್ಳೆಯ ಕೆಲಸವನ್ನ ನಮ್ಮ ಸರ್ಕಾರ ಮಾಡ್ತಿದೆ. ಎಸ್ಟಿ ಮೀಸಲಾತಿಗೆ ಎಷ್ಟೋ ವರ್ಷದಿಂದ ಹೋರಾಟ ನಡೆಯುತ್ತಿತ್ತು. ನಾವು ಮಾಡಿದ್ದು ಅಂತ ಬೇರೆ ಪಕ್ಷದವರು ಮೂಗು ವರಸಿಕೊಳ್ತಿದ್ದಾರೆ. ಅವರ ಮಾತು ಸತ್ಯಕ್ಕೆ ದೂರವಾದುದ್ದು. ಇನ್ನು ನಮ್ಮ ಸರ್ಕಾರ, ಸಿಎಂ, ಪ್ರಧಾನಿ, ಬಿಜೆಪಿಯಿಂದ ಈ ಕಾರ್ಯ ಹಾಗಿದ್ದು.

ನೆನ್ನೆ ಸಿದ್ದರಾಮಯ್ಯ ಮಂಡ್ಯಕ್ಕೆ ಬಂದು ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಇಷ್ಟು ದಿನ ಯಾಕೆ ಕುಳ್ತಿದ್ರು, 5 ವರ್ಷ ಸಿಎಂ ಹಾಗಿದ್ರು ಯಾಕೆ ಮಾಡಿಲ್ಲ? ಅವರ ಸರ್ಕಾರ ಇದ್ರು ಮಾಡಿಲ್ಲ ಅವರು. ನಾವು ಸತ್ಯವನ್ನ ಬಿಚ್ಚಿಡುವ ಕೆಲಸ ಮಾಡ್ತೇವೆ. ಸಮುದಾಯಕ್ಕೆ ನಾವು ಜೊತೆ ಇದ್ದೇವೆ, ನಮ್ಮ ಸರ್ಕಾರ ಮಾಡುತ್ತೆ ಅನ್ನೊ ನಂಬಿಕೆ ಇದೆ. ಸಿಎಂ ಜೊತೆ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದೆ. ಒಕ್ಕಲಿಗ ಸಮುದಾಯಕ್ಕೆ ಶಕ್ತಿ ತುಂಬಬೇಕು ಎಂದು ಮನವಿ. ಸಿಎಂ ಇದ್ದಾರೆ ಒಕ್ಕಲಿಗರ ಸಮುದಾಯಕ್ಕೆ ಅನ್ಯಾಯ ಹಾಗಲು ಬಿಡಲ್ಲ. ಖಂಡಿತ ನಮ್ಮ ಸರ್ಕಾರ ಕೆಲಸ ಮಾಡುತ್ತೆ.

ನಾವೇ ಸರ್ಕಾರ, ನಮಗೆ ಪವರ್ ಇದೆ, ಸಿಎಂ ನಮ್ಮ ಮಾತು ಕೇಳ್ತಾರೆ.ಭಾರತ ಸರ್ಕಾರದ ಗಮನ ಸೆಳೆದು ಕಾರ್ಯಗತಗೊಳಿಸುತ್ತೇವೆ.
ಮಾತುಕತೆಯಾಗಿದೆ ಇದರ ಬಗ್ಗೆ ಚಿಂತೆ ಬೇಡ. ಒಕ್ಕಲಿಗರ ಸಮುದಾಯಕ್ಕೆ ಅನ್ಯಾಯ ಹಾಗಲು ಬಿಡಲ್ಲ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES