Wednesday, January 22, 2025

ಹಸುಗೆ ಡಿಕ್ಕಿಯಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಜಖಂ

ನವದೆಹಲಿ: ಗಾಂಧಿನಗರ ಹಾಗೂ ಮುಂಬೈ ಮಾರ್ಗದ ನಡುವೆ ಅತುಲ್ ರೈಲು ನಿಲ್ದಾಣದ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಇಂದು ಬೆಳಿಗ್ಗೆ ಗುಜರಾತ್‌ನಲ್ಲಿ ಹಸುವೊಂದಕ್ಕೆ ಡಿಕ್ಕಿ ಹೊಡೆದು ರೈಲು ಜಖಂಗೊಂಡಿದೆ.

ಇದು ಒಂದು ತಿಂಗಳ ಅವಧಿಯಲ್ಲಿ ನಡೆದ ಮೂರನೇ ಘಟನೆಯಾಗಿದೆ. ಡಿಕ್ಕಿಯ ನಂತರ ಹೈ ಸ್ಪೀಡ್ ರೈಲನ್ನು ಸುಮಾರು 15 ನಿಮಿಷಗಳ ಕಾಲ ನಿಲ್ಲಿಸಲಾಯಿತು, ಈ ಘಟನೆಯಿಂದ ಹೈಸ್ಪೀಡ್​ ರೈಲಿನ ಮುಂಭಾಗ ಜಖಂಗೊಂಡಿತು.

ಈ ತಿಂಗಳ ಆರಂಭದಲ್ಲಿ, ಹೊಸದಾಗಿ ಪ್ರಾರಂಭಿಸಲಾದ ರೈಲು ಗುಜರಾತ್‌ನ ಆನಂದ್ ನಿಲ್ದಾಣದ ಬಳಿ ನಾಲ್ಕು ಎಮ್ಮೆಗಳಿಗೆ ಡಿಕ್ಕಿ ಹೊಡೆದ ಒಂದು ದಿನದ ನಂತರ ಹಸುವಿಗೆ ಡಿಕ್ಕಿ ಹೊಡೆದಿತ್ತು.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಜಾನುವಾರುಗಳೊಂದಿಗೆ ಇಂತಹ ಘರ್ಷಣೆಯನ್ನು ತಪ್ಪಿಸಲಾಗುವುದಿಲ್ಲ ಮತ್ತು “ರೈಲು ವಿನ್ಯಾಸ ಮಾಡುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗಿದೆ ಎಂದು ಹೇಳಿದ್ದರು.

RELATED ARTICLES

Related Articles

TRENDING ARTICLES