Monday, December 23, 2024

ತಲೈವಾ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಬ್​

‘ಕಾಂತಾರ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ರಿಲೀಸ್​ ಆದ ದಿನದಿಂದಲೂ ದಾಖಲೆಯ ಮೇಲೆ ದಾಖಲೆಯನ್ನು ಬರೆಯುತ್ತಿದೆ. ಪರಭಾಷೆಯ ಅನೇಕ ಸ್ಟಾರ್​ ಕಲಾವಿದರು ಈ ಚಿತ್ರವನ್ನು ಹಾಡಿ ಹೊಗಳಿದ್ದಾರೆ.

ರಜನಿಕಾಂತ್​ ಅವರಿಗೂ ‘ಕಾಂತಾರ’ ತುಂಬ ಇಷ್ಟ ಆಗಿದೆ. ರಜನಿಕಾಂತ್​ ‘ಕಾಂತಾರ’ ಸಿನಿಮಾ ನೋಡಿ ಟ್ವೀಟರ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದರು. ಈಗ ಅವರನ್ನು ಭೇಟಿ ಆಗುವ ಚಾನ್ಸ್​ ರಿಷಬ್​ ಶೆಟ್ಟಿಗೆ ಸಿಕ್ಕಿದೆ. ‘ಸೂಪರ್​ ಸ್ಟಾರ್​’ ರಜನಿಕಾಂತ್​ ನಿವಾಸಕ್ಕೆ ಭೇಟಿ ನೀಡಿರುವ ರಿಷಬ್​ ಅವರು, ಒಂದಷ್ಟು ಮಾತುಕಥೆ ನಡೆಸಿದ್ದಾರೆ. ರಜನಿಕಾಂತ್​ ಅವರ ಕಾಲಿಗೆ ಬಿದ್ದು ನಮಸ್ಕರಿಸಿ, ಆಶೀರ್ವಾದ ಪಡೆದಿದ್ದಾರೆ.

ಇನ್ನು ರಿಷಬ್​ ಶೆಟ್ಟಿಗೆ ಸೂಪರ್​ ಸ್ಟಾರ್​ ರಜನಿಕಾಂತ್​ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಈ ಫೋಟೋಗಳನ್ನು ಚಿತ್ರತಂಡ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದೆ.‘ಕಾಂತಾರ’ ಚಿತ್ರ ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದೆ. ಇಂದಿಗೂ ಹಲವು ಕಡೆಗಳಲ್ಲಿ ಈ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಬೇರೆ ಭಾಷೆಗಳಿಗೂ ಡಬ್​ ಆಗಿ ಸೂಪರ್​ ಹಿಟ್​ ಆಗಿದೆ. ನೂರಾರು ಕೋಟಿ ರೂಪಾಯಿ ಗಳಿಕೆ ಮಾಡಿದೆ.

RELATED ARTICLES

Related Articles

TRENDING ARTICLES