Monday, December 23, 2024

ಅಪ್ಪು ಪುತ್ಥಳಿ ಅನಾವರಣ

ಇಂದು ಅಪ್ಪು ಪುಣ್ಯ ಸ್ಮರಣೆ ಕಾರ್ಯಕ್ರಮ ಹಿನ್ನೆಲೆ, ಕೊಪ್ಪಳದ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಪುನೀತ್ ರಾಜ್‍ಕುಮಾರ್ ಪುತ್ಥಳಿ ಅನಾವರಣಗೊಂಡಿದೆ.

ತಾಲೂಕಿನ ಶ್ರೀರಾಮನಗರದಲ್ಲಿ ಬಹುತೇಕ ಆಂಧ್ರದ ಜನ ಇದ್ದಾರೆ.. ತೆಲುಗು ಮಂದಿಯಲ್ಲೂ ಅಪ್ಪು ಅಚ್ಚಳಿಯದೇ ಉಳಿದಿದ್ದಾನೆ ಎಂಬುದನ್ನು ಕಾಣಬಹುದು. ಹೆಬ್ಬಾಳ ಮಠದ ಸ್ವಾಮೀಜಿ ಪುನೀತ್ ರಾಜ್‍ಕುಮಾರ್ ಸರ್ಕಲ್ ಉದ್ಘಾಟನೆ ಮಾಡಿದರು. ಪುನೀತ್ ರಾಜಕುಮಾರ ಮಾಡಿದ ಮಹತ್ಕಾರ್ಯಗಳ ಬಗ್ಗೆ ಸ್ವಾಮೀಜಿ ಹಾಡಿ ಹೊಗಳಿದ್ದಾರೆ. ಅಪ್ಪು ಸರ್ಕಲ್ ನಿರ್ಮಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಪುನೀತ್ ನಗುಮುಖದ ಪುತ್ಥಳಿ ಮುಂದೆ ಫೋಟೋಗಾಗಿ ಅಭಿಮಾನಿಗಳು ಮುಗಿಬಿದ್ದರು.

RELATED ARTICLES

Related Articles

TRENDING ARTICLES