ಬೆಂಗಳೂರು : ಅಗ್ನಿಶಾಮಕ ಸಿಬ್ಬಂದಿಯ ಲಂಚ ಲಂಚಬಾಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪವರ್ ಟಿವಿ ವಿಸ್ತೃತ ವರದಿ ಮಾಡಿತ್ತು. ಇದೀಗ ನಾಲ್ವರು ಲಂಚಬಾಕ ಡಿಸ್ಟ್ರಿಕ್ಟ್ ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ.
ಡಿಜಿ, ಅಮರ್ ಕುಮಾರ್ ಪಾಂಡೆ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ಧಾರೆ. ಜಗದೀಶ್, ಬಾ.ಮಾ.ಶೇಖರ್, ಸಿದ್ದೇಗೌಡ, ಹೊನ್ನೆಗೌಡ ಸಸ್ಪೆಂಡ್ ಆಗಿದ್ದಾರೆ. ಪವರ್ ಟಿವಿ ಸುದ್ದಿ ಪ್ರಸಾರ ಬೆನ್ನಲ್ಲೇ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಿದೆ. ಈ ಅಧಿಕಾರಿಗಳು ಹಣದಾಸೆಗೆ ಜನಸಾಮಾನ್ಯರ ಪ್ರಾಣಕ್ಕೆ ಕುತ್ತು ತರುತ್ತಿದ್ದರು. ಹಣ ಕೊಟ್ರೆ ಎಲ್ಲದಕ್ಕೂ NOC ಕೊಟ್ಟು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರು.
ನಿಯಮಗಳನ್ನ ಉಲ್ಲಂಘಿಸಿ ಲಂಚ ಪಡೆದು NOC ನೀಡುತ್ತಿದ್ದರು. ಲಕ್ಷಗಟ್ಟಲೆ ಹಣ ಪಡೆದು ಅಕ್ರಮಗಳನ್ನು ಮುಚ್ಚಿ ಹಾಕಿದ್ದರು. ಗಾರ್ಮೆಂಟ್ಸ್, ಬಿಲ್ಡಿಂಗ್ಗಳು, ಗಮ್ ಫ್ಯಾಕ್ಟರಿ, ಕೆಮಿಕಲ್ ಫ್ಯಾಕ್ಟರಿಗಳಲ್ಲಿ ಅಕ್ರಮಗಳಲ್ಲಿ ಇವರ ಕೈವಾಡವಿತ್ತು. ಈ ಹಿನ್ನೆಲೆ ದೂರಿನನ್ವಯ ಅಗ್ನಿಶಾಮಕ ದಳ ಅಧಿಕಾರಿಗಳ ವಿರುದ್ಧ ಪವರ್ ಟಿವಿ ಸ್ಟಿಂಗ್ ಆಪರೇಷನ್ ಮೂಲಕ ಅಧಿಕಾರಿಗಳ ಮುಖವಾಡ ಬಯಲು ಮಾಡಿತ್ತು. ಈ ಬೆನ್ನಲ್ಲೇ ಲಂಚಬಾಕರ ಸಸ್ಪೆಂಡ್ ಆಗಿದೆ. ಇದು ಪವರ್ ಟಿವಿ ವರದಿಯ ಫಲಶೃತಿಯಾಗಿದೆ.